ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತ್ರಕರ್ತ ರಾಜದೀಪ್ ವಿರುದ್ಧ ಸ್ವಯಂ ಪ್ರೇರಿತ ಕೇಸ್ ದಾಖಲಿಸಿದ ಸುಪ್ರೀಂ!

ನವದೆಹಲಿ: ನ್ಯಾಯಾಂಗ ನಿಂದಿಸಿದ ಆರೋಪದ ಮೇಲೆ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಅವರ ವಿರುದ್ಧ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದೆ.

ನ್ಯಾಯಾಂಗ ನಿಂದನೆ ಕುರಿತು ಅಸ್ತಾ ಖುರಾನ ಸಲ್ಲಿಸಿದ್ದ ಅರ್ಜಿ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಸುಮೋಟೋ ಕೇಸ್ ಪ್ರಕರಣ ದಾಖಲಿಸಿದೆ. ಅರ್ಜಿದಾರರು ತಮ್ಮ ದೂರಿನಲ್ಲಿ, ಜುಲೈ ಮತ್ತು ಆಗಸ್ಟ್ 2020 ರಲ್ಲಿ ರಾಜ್‌ದೀಪ್ ಮಾಡಿದ ಎರಡು ಟ್ವೀಟ್‌ಗಳನ್ನು ಉಲ್ಲೇಖಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಟಿವಿ ಆಂಕರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ನಿರಾಕರಿಸಿದ ಐದು ತಿಂಗಳ ನಂತರ ಈ ಬೆಳವಣಿಗೆಗಳು ಸಂಭವಿಸಿವೆ.

ಸುಪ್ರೀಂ ಕೋರ್ಟ್ ಹಾಗೂ ಮುಖ್ಯನ್ಯಾಯಮೂರ್ತಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ ವಕೀಲ ಪ್ರಶಾಂತ್ ಭೂಷಣ್ ನ್ಯಾಯಾಂಗ ನಿಂದನೆ ಮಾಡಿರುವುದು ಸಾಬೀತಾಗಿತ್ತು. ದೂಷಿ ಎಂದು ಸಾಬೀತಾಗಿರುವ ಪ್ರಶಾಂತ್ ಭೂಷಣ್‌ಗೆ 1 ರೂಪಾಯಿ ದಂಡ ವಿದಿಸಿತ್ತು. ನ್ಯಾಯಾಲದ ಈ ತೀರ್ಪನ್ನು ರಾಜಜೀಪ್ ಸರ್ದೇಸಾಯಿ ಅಣಕಿಸಿದ್ದರು. ಸುಪ್ರೀಂ ಕೋರ್ಟ್ ಮುಜುಗರದಿಂದ ಹೊರಬರಲು ಈ ರೀತಿ ತೀರ್ಪು ನೀಡಿದೆ ಎಂದು ಸರ್ದೇಸಾಯಿ 31.08.2020ರಂದು ಟ್ವೀಟ್ ಮಾಡಿದ್ದರು.

ಇಷ್ಟಕ್ಕೆ ಸುಮ್ಮನಾಗದ ರಾಜದೀಪ್ ಸರ್ದೇಸಾಯಿ 2020ರ ಆಗಸ್ಟ್ 14ರಲ್ಲಿ ಪ್ರಶಾಂತ್ ಭೂಷಣ್ ಪ್ರಕರಣದ ತೀರ್ಪನ್ನು ಕಾಶ್ಮೀರದ ಹೇಬಿಯಸ್ ಕಾರ್ಪಸ್ ಪಿಟೀಶನ್‌ಗೆ ಹೋಲಿಕೆ ಮಾಡಿದ್ದರು. ಇದೇ ಟ್ವೀಟ್ ರಾಜದೀಪ್ ಸರ್ದೇಸಾಯಿಗೆ ಸಂಕಷ್ಟ ತಂದಿದೆ. ಇತ್ತೀಚೆಗೆ ರೈತ ಹೋರಾಟದಲ್ಲಿ ತಪ್ಪು ಸಂದೇಶ ಟ್ವೀಟ್ ಮಾಡಿದ್ದರು. ಈ ಕುರಿತು ಪ್ರಕರಣ ದಾಖಲಾಗಿದೆ.

Edited By : Vijay Kumar
PublicNext

PublicNext

16/02/2021 11:02 pm

Cinque Terre

49.02 K

Cinque Terre

4

ಸಂಬಂಧಿತ ಸುದ್ದಿ