ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಇದು ಬಾಹುಬಲಿ ಸೆಟ್​ ಅಲ್ಲ ಕಣ್ರೀ'

ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆ ಕಾವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ಘಾಜಿಪುರ್​​ ಬಾರ್ಡರ್ ಅಕ್ಷರಶಃ ಯಾವುದೋ ಸಿನಿಮಾ ಸೆಟ್​ನಂತೆ ಪೊಲೀಸ್‌ ಪಡೆ ನಿಯೋಜನೆಗೊಂಡಿದೆ.

ಘಾಜಿಪುರ್​ ಗಡಿಯಲ್ಲಿ ನೂರಾರು ಪೊಲೀಸರು ಸೈನಿಕರಂತೆ ನಿಂತಿದ್ದು, ಅವರ ಮುಂದೆ ಹತ್ತಾರು ಅಡಿಗಳಷ್ಟು ದೂರ ಸಿಮೆಂಟ್​ನ ಬ್ಯಾರಿಕೇಡ್​ಗಳನ್ನು ಜೋಡಿಸಲಾಗಿದೆ. ಅವುಗಳ ಮಧ್ಯೆ ಸಿಮೆಂಟ್ ಸುರಿದು, ಮೊಳೆಗಳನ್ನು ಇಡಲಾಗಿದೆ. ಅಷ್ಟೇ ಅಲ್ಲದೆ ನಾಲ್ಕೈದು ಸಾಲುಗಳಲ್ಲಿ ಕಬ್ಬಿಣದ ಬ್ಯಾರಿಕೇಡ್​ಗಳನ್ನು ನಿಲ್ಲಿಸಲಾಗಿದೆ. ಇದರೊಂದಿಗೆ ಲಾಠಿ ಹಿಡಿಯುತ್ತಿದ್ದ ಪೊಲೀಸರ ಕೈಗೆ ಖಡ್ಗದಂತೆ ಕಾಣುವ ಕಬ್ಬಿಣದ ರಾಡ್‌ಗಳು ನೀಡಲಾಗಿದೆ. ಈ ಎಲ್ಲ ದೃಶ್ಯಗಳ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಫೆಬ್ರವರಿ 6ರಂದು ದೇಶದಾದ್ಯಂತ 3 ಗಂಟೆ ಕಾಲ ರಸ್ತೆ ತಡೆ ನಡೆಸುವಂತೆ ರೈತ ಸಂಘಟನೆಗಳು ಕರೆಕೊಟ್ಟಿವೆ. ರೈತರು ಕೃಷಿ ಕಾನೂನುಗಳನ್ನು ವಾಪಸ್ ತೆಗೆದುಕೊಳ್ಳದ ಹೊರತು ವಾಪಸ್ ತೆರಳುವುದಿಲ್ಲ ಎಂದು ಪಟ್ಟು ಹಿಡಿದಿದ್ರೆ. ಇನ್ನೊಂದೆಡೆ ಸರ್ಕಾರ ತಿದ್ದುಪಡಿಯ ಹೊರತಾಗಿ ಮತ್ಯಾವ ಆಯ್ಕೆಯನ್ನೂ ನೀಡಲ್ಲ ಎಂದು ನಿರ್ಧರಿಸಿದಂತಿದೆ.

Edited By : Vijay Kumar
PublicNext

PublicNext

02/02/2021 11:47 am

Cinque Terre

47.79 K

Cinque Terre

2

ಸಂಬಂಧಿತ ಸುದ್ದಿ