ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಳು ಸುದ್ದಿ ನೀಡಿದ ರಾಜ್‌ದೀಪ್ ಸರ್ದೇಸಾಯಿಗೆ ಬಿಸಿ ಮುಟ್ಟಿಸಿದ ಇಂಡಿಯಾ ಟುಡೆ

ನವದೆಹಲಿ: ಸುಳ್ಳು ಸುದ್ದಿ ನೀಡಿ ಸಿಕ್ಕಿಬಿದ್ದ ವಿವಾದಾತ್ಮಕ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಅವರಿಗೆ ಇಂಡಿಯಾ ಟುಡೆ ಬಿಸಿ ಮುಟ್ಟಿಸಿದೆ.

ಹೌದು. ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಪೊಲೀಸರ ಗುಂಡಿಗೆ 45 ವರ್ಷ ವಯಸ್ಸಿನ ರೈತ ಬಲಿಯಾಗಿದ್ದಾರೆ ಎಂದು ರಾಜ್‌ದೀಪ್ ಸರ್ದೇಸಾಯಿ ವರದಿ ಮಾಡಿದ್ದರು. ಈ ಬಗ್ಗೆ ಭಾರೀ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂಡಿಯಾ ಟುಡೆ, ತಾತ್ಕಾಲಿಕವಾಗಿ ರಾಜ್‌ದೀಪ್ ಸರ್ದೇಸಾಯಿ ಅವರನ್ನು ನಿರೂಪಣೆಯಿಂದ ಹೊರಗಿಟ್ಟಿದೆ. ಅಷ್ಟೇ ಅಲ್ಲದೆ ಒಂದು ತಿಂಗಳ ವೇತನವನ್ನು ಕಡಿತಗೊಳಿಸಿದೆ.

ನಡೆದಿದ್ದೇನು?:

ರೈತ ನವೀನೀತ್ ಸಿಂಗ್ ಅವರು ವೇಗವಾಗಿ ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ಬರುತ್ತಿದ್ದರು. ಈ ವೇಳೆ ರಸ್ತೆಗೆ ಅಡ್ಡಲಾಗಿ ಹಾಕಿದ್ದ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿ ಹೊಡೆದಿದೆ. ರೈತ ನವೀನೀತ್ ಸಿಂಗ್‌ ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಪೊಲೀಸರು ರಕ್ಷಣೆಗೆ ಮುಂದಾಗಿದ್ದರು. ಆದರೆ ಪ್ರತಿಭಟನಾ ನಿರತ ರೈತರು ಇದಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ನವೀನೀತ್ ಸಿಂಗ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದ್ದಾರೆ.

ರಾಜ್‌ದೀಪ್ ಸರ್ದೇಸಾಯಿ ಅವರು ಸುಳ್ಳು ವರದಿ ಮಾಡಿ ಟೀಕೆಗೆ ಗುರಿಯಾಗಿದ್ದು ಇದೇ ಮೊದಲೇನಲ್ಲ. ಒಂದು ವರ್ಷದ ಹಿಂದೆ 2007ರ ಸೊಹ್ರಾಬುದ್ದೀನ್‌ ಶೇಖ್‌ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳನ್ನು ಹರಡಿ ಐಪಿಎಸ್ ಅಧಿಕಾರಿಗೆ ಕ್ಷಮೆಯಾಚಿಸಿದ್ದರು.

Edited By : Vijay Kumar
PublicNext

PublicNext

28/01/2021 06:19 pm

Cinque Terre

67.96 K

Cinque Terre

14

ಸಂಬಂಧಿತ ಸುದ್ದಿ