ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಂದೂ ದೇವರಿಗೆ ಅವಮಾನ: ಮುನ್ವರ್‌ ಫಾರೂಕಿ ಜಾಮೀನು ಅರ್ಜಿ ವಜಾ

ಭೋಪಾಲ್: ಹಿಂದೂ ದೇವರಿಗೆ ಅವಮಾನ ಪ್ರಕರಣದ ಆರೋಪಿ ಕಾಮಿಡಿಯನ್ ಮುನವ್ವರ್ ಫಾರೂಖಿ ಹಾಗೂ ಮತ್ತೋರ್ವ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಧ್ಯಪ್ರದೇಶದ ಹೈಕೋರ್ಟ್ ಇಂದು ತಿರಸ್ಕರಿಸಿದೆ.

ಮುನವ್ವರ್ ಫಾರೂಖಿ ಪ್ರದರ್ಶನವೊಂದರ ಸಮಯದಲ್ಲಿ ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸಿದ ಆರೋಪದ ಮೇಲೆ ಜೈಲು ಸೇರಿದ್ದಾನೆ. ಪ್ರಮುಖವಾಗಿ ಈ ಪ್ರಕರಣದ ಸಾಕ್ಷಿಗಳಾದ ದೂರುದಾರ ಏಕಲವ್ಯ ಸಿಂಗ್ ಗೌರ್ ಹಾಗೂ ಕುನಾಲ್ ಎಂಬವರ ಹೇಳಿಕೆಯನ್ನು ಅವಲಂಬಿಸಿ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ಏಕಲವ್ಯ ಬಿಜೆಪಿ ಶಾಸಕಿ ಮಾಲಿನಿ ಗೌರ್ ಅವರ ಪುತ್ರನಾಗಿದ್ದು, ಸ್ಥಳೀಯ ಹಿಂದೂ ಸಂಘಟನೆಯ ನಾಯಕರೂ ಆಗಿದ್ದಾರೆ. ಇಂದು ವಿಚಾರಣೆ ನಡೆಸಿದ ನ್ಯಾಯಾಲಯವು ದೂರುದಾರರು, ಸಾಕ್ಷಿಗಳ ಹೇಳಿಕೆ ಮತ್ತು ಕಾರ್ಯಕ್ರಮದ ವಿಡಿಯೋ ಪರಿಶೀಲಿಸಿ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

Edited By : Vijay Kumar
PublicNext

PublicNext

28/01/2021 03:26 pm

Cinque Terre

86.5 K

Cinque Terre

43