ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಕೆಂಪುಕೋಟೆಯ ಗೋಪುರ ಏರಿದ ರೈತರು ರಾಷ್ಟ್ರಧ್ವಜ ಏರಿಸುವ ಜಾಗದಲ್ಲಿ ರೈತ ಧ್ವಜ ಏರಿಸಿದ್ದಾರೆ.
ಸ್ವಾತಂತ್ರ್ಯೋತ್ಸ್ವವದಂದು ಪ್ರಧಾನ ಮಂತ್ರಿಗಳು ರಾಷ್ಟ್ರಧ್ವಜಾರೋಹಣ ಮಾಡುವ ಜಾಗದಲ್ಲೇ ರೈತ ಧ್ವಜ ಹಾರಾಡಿದೆ. ಇದು ಸ್ವಾತಂತ್ರ್ಯೋತ್ತರ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎನ್ನಲಾಗಿದೆ.
ಕೆಂಪುಕೋಟೆ ಸ್ಥಳವು ದೇಶದ ಪಾರಂಪರಿಕ ತಾಣವಾಗಿದೆ. ಅಲ್ಲಿನ ರಾಷ್ಟ್ರ ಧ್ವಜ ಹಾರಿಸುವ ಜಾಗದಲ್ಲಿ ಬೇರೆ ಧ್ವಜವನ್ನು ಹಾರಿಸುವಂತಿಲ್ಲ ಎಂಬ ನಿಯಮ ಇದೆ. ಹೀಗಾಗಿ ರೈತ ಧ್ವಜವನ್ನು ಅಲ್ಲಿ ಹಾರಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಎದ್ದಿದೆ.
PublicNext
26/01/2021 03:37 pm