ಹೊಸ ದಿಲ್ಲಿ: ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ ರೈತರ ಪ್ರತಿಭಟನೆ ವೇಳೆ ಜೀವ ಬಲಿಯಾಗಿದೆ. ದಿಲ್ಲಿ ಹೃದಯ ಭಾಗದಲ್ಲೇ ಇರುವ ಐಟಿಒ (ಆದಾಯ ತೆರಿಗೆ ಕಚೇರಿ) ಮೆಟ್ರೋ ನಿಲ್ದಾಣದ ಬಳಿಯಲ್ಲೇ ಇರುವ ಡಿಡಿಯು ಮಾರ್ಗದಲ್ಲಿ ಸಂಭವಿಸಿದ ಘರ್ಷಣೆಯಲ್ಲಿ ರೈತ ಸಾವನ್ನಪ್ಪಿದ್ದಾನೆ.
ರಸ್ತೆ ಪಕ್ಕದಲ್ಲಿ ರೈತನ ಮೃತದೇಹ ಪತ್ತೆಯಾಗಿದೆ. ಕೆಲವರು ರೈತನಿಗೆ ಗುಂಡೇಟು ತಗುಲಿದೆ ಎಂದು ವಾದಿಸಿದರೆ, ಮತ್ತೆ ಕೆಲವರು ಟ್ರ್ಯಾಕ್ಟರ್ ಗುದ್ದಿದ ಕಾರಣ ಈತ ಸಾವನ್ನಪ್ಪಿದ್ದಾನೆ ಎಂದು ವಾದಿಸುತ್ತಿದ್ಧಾರೆ. ಈ ಸಾವಿನಿಂದ ಆಕ್ರೋಶಿತರಾದ ಇನ್ನುಳಿದ ಪ್ರತಿಭಟನಾ ನಿರತ ರೈತರು ಐಟಿಒ ಬಳಿಯಲ್ಲೇ ಇರುವ ಪೊಲೀಸ್ ಪ್ರಧಾನ ಕಚೇರಿ ಬಳಿ ರೈತರು ಆಕ್ರೋಶಿತರಾಗಿ ಪ್ರತಿಭಟನೆ ಆರಂಭಿಸಿದ್ದಾರೆ.
ರೈತರ ಆಕ್ರೋಶಕ್ಕೆ ಪೊಲೀಸ್ ವಾಹನಗಳು ಜಖಂಗೊಂಡಿವೆ. ರಿಸರ್ವ್ ಪೊಲೀಸರ ಬಸ್‌ಗಳು, ಪ್ಯಾಟ್ರೋಲಿಂಗ್ ಕಾರುಗಳು ಸೇರಿದಂತೆ ಹಲವು ವಾಹನಗಳನ್ನು ಪ್ರತಿಭಟನಾಕಾರರು ಜಖಂಗೊಳಿಸಿದ್ದಾರೆ. ರೈತನ ಈ ಸಾವಿಗೆ ನಿಖರ ಕಾರಣ ಇದುವರೆಗೆ ತಿಳಿದು ಬಂದಿಲ್ಲ.
PublicNext
26/01/2021 03:15 pm