ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನ್ನದಾತರಿಂದ ದೆಹಲಿ ದಂಡ ಯಾತ್ರೆ: ರಾಜ್ಯ ರಾಜಧಾನಿಯಲ್ಲೂ ಹೋರಾಟದ ಕಿಚ್ಚು

ಬೆಂಗಳೂರು: ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದಿಲ್ಲಿಯಲ್ಲಿ ನಡೆಯುವ 'ರೈತ ಗಣತಂತ್ರ ಪಥಸಂಚಲನ'ಕ್ಕೆ ರಾಜ್ಯದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಪೊಲೀಸ್‌ ಇಲಾಖೆ ಅನುಮತಿ ನಿರಾಕರಣೆ ನಡುವೆಯೂ ಮಂಗಳವಾರ ನಾನಾ ರೈತ, ದಲಿತ ಮತ್ತು ಕಾರ್ಮಿಕ ಸಂಘಟನೆಗಳು ಬೆಂಗಳೂರಿನಲ್ಲಿ ಟ್ರ್ಯಾಕ್ಟರ್‌ ಸೇರಿದಂತೆ ಸಾವಿರಾರು ವಾಹನಗಳ ಪರೇಡ್‌ ನಡೆಸಲು ತೀರ್ಮಾನಿಸಿವೆ. ಇದರ ಜತೆಗೆ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಲ್ಲೂ ದೊಡ್ಡ ಮಟ್ಟದ ಪ್ರತಿಭಟನೆ ಯೋಜಿತವಾಗಿವೆ.

ಈ ನಡುವೆ, ರೈತ ಮುಖಂಡರೊಂದಿಗೆ ಸಭೆ ನಡೆಸಿದ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌, ಸಂಚಾರ ದಟ್ಟಣೆ ಮತ್ತು ಕೋವಿಡ್‌ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್‌ ರ‍್ಯಾಲಿ ಕೈಬಿಡುವಂತೆ ಮನವಿ ಮಾಡಿದರು. ಆಯುಕ್ತರ ಮನವಿಗೆ ಬಗ್ಗದ ರೈತ ಮುಖಂಡರು ಟ್ರ್ಯಾಕ್ಟರ್‌ ರ‍್ಯಾಲಿ ನಡೆಸೇ ತೀರುವುದಾಗಿ ಪಟ್ಟು ಹಿಡಿದಿದ್ದಾರೆ. ಹಾಗಾಗಿ, ನಗರದ ಗಡಿಗಳಲ್ಲಿ ಟ್ರ್ಯಾಕ್ಟರ್‌ಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಮೈಸೂರು, ತುಮಕೂರು, ಕೋಲಾರ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸೋಮವಾರ ಸಂಜೆ ಬೆಂಗಳೂರಿನತ್ತ ಹೊರಟಿದ್ದ ರೈತರ ಟ್ರ್ಯಾಕ್ಟರ್‌ಗಳನ್ನು ಆಯಾ ಜಿಲ್ಲೆಗಳ ಗಡಿಯಲ್ಲಿ ಪೊಲೀಸರು ತಡೆದ ಘಟನೆಗಳು ನಡೆದಿವೆ. ಟ್ರ್ಯಾಕ್ಟರ್‌ಗಳನ್ನು ತಡೆದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು, ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು. ಹಾಗಾಗಿ, ಅನ್ಯಮಾರ್ಗಗಳ ಮೂಲಕ ನಗರ ಪ್ರವೇಶಕ್ಕೆ ರೈತರು ಯೋಜನೆ ರೂಪಿಸಿದ್ದಾರೆ.

Edited By : Nagaraj Tulugeri
PublicNext

PublicNext

25/01/2021 11:34 pm

Cinque Terre

48.94 K

Cinque Terre

11

ಸಂಬಂಧಿತ ಸುದ್ದಿ