ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

20 ವರ್ಷದ ಸೇವೆಯಲ್ಲಿ 40 ಬಾರಿ ವರ್ಗಾವಣೆಗೊಂಡ ಡಿ ರೂಪಾ

ಬೆಂಗಳೂರು: ನಿನ್ನೆಯಷ್ಟೇ ವರ್ಗಾವಣೆಯಾಗಿರುವ ಐಪಿಎಸ್ ಅಧಿಕಾರಿ ಡಿ ರೂಪಾ ಅವರು ಕಾರ್ಯದಕ್ಷತೆ, ಪ್ರಾಮಾಣಿಕ ಸೇವೆಗೆ ಹೆಸರಾಗಿದ್ದಾರೆ. 20ವರ್ಷಗಳ ಅವರ ಸೇವಾವಧಿಯಲ್ಲಿ ಅವರು 40ಬಾರಿ ವರ್ಗಾವಣೆಯಾಗಿದ್ದಾರೆ ! ರಾಜ್ಯ ಗೃಹ ಕಾರ್ಯದರ್ಶಿ ಹುದ್ದೆಯಲ್ಲಿದ್ದ ರೂಪಾ ವರ್ಗಾವಣೆ ಆದೇಶ ಬಂದ ಮರುದಿನವೇ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರು.

2000 ಬ್ಯಾಚ್‌ನ ರೂಪಾ, ಪ್ರೊಬೇಷನರಿ ಅವಧಿ ಸೇರಿ 20 ವರ್ಷಗಳಿಂದ ಪೊಲೀಸ್‌ ಇಲಾಖೆಯಲ್ಲಿದ್ದಾರೆ. 2017ರ ಜೂನ್‌ನಲ್ಲಿ ಬಂಧೀಖಾನೆ ಡಿಐಜಿಪಿ ಹುದ್ದೆಗೆ ಹಿಂದಿನ ಸಿದ್ದರಾಮಯ್ಯ ಸರಕಾರ ವರ್ಗಾವಣೆ ಮಾಡಿತ್ತು. ಈ ವೇಳೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವುದನ್ನು ಬಹಿರಂಗಪಡಿಸಿದ್ದರು. ಹೀಗಾಗಿ, ಅಧಿಕಾರ ಸ್ವೀಕರಿಸಿದ ಒಂದು ತಿಂಗಳ ಒಳಗಾಗಿಯೇ ರೂಪಾ ಅವರನ್ನು ರಸ್ತೆ ಸುರಕ್ಷತೆ ಆಯುಕ್ತರ ಹುದ್ದೆಗೆ ಎತ್ತಂಗಡಿ ಮಾಡಲಾಗಿತ್ತು.

ನೇರ ನುಡಿ, ನಿಷ್ಠುರದ ಸ್ವಭಾವದ ಕಾರಣ ಯಾವುದೇ ಸರಕಾರ ಬಂದರೂ ಡಿ.ರೂಪಾ ಅವರಿಗೆ ಅಧಿಕೃತ ಹುದ್ದೆಗಳನ್ನು ನೀಡೋದಿಲ್ಲ. ಒಂದು ವೇಳೆ ಮಹತ್ವದ ಹುದ್ದೆಗಳು ಸಿಕ್ಕರೂ ಕೆಲವೇ ದಿನಗಳಲ್ಲಿ ಡಿ ರೂಪಾ ವರ್ಗಾವಣೆಯಾಗುತ್ತಾರೆ ಎನ್ನುವುದಕ್ಕೆ ನಿನ್ನೆಯಷ್ಟೇ ನಡೆದ ವರ್ಗಾವಣೆಯೇ ಸಾಕ್ಷಿಯಾಗಿದೆ.

Edited By : Nagaraj Tulugeri
PublicNext

PublicNext

01/01/2021 10:59 pm

Cinque Terre

95.26 K

Cinque Terre

27

ಸಂಬಂಧಿತ ಸುದ್ದಿ