ಬೇಕಾಗುವ ಸಾಮಗ್ರಿಗಳು : ಎಣ್ಣೆ – ಕರಿಯಲು, ಮೀನಿನ ತುಂಡು – 250 ಗ್ರಾಂ, ಕಾರ್ನ್ ಫ್ಲೋರ್ – 1 1/2 ಟೇಬಲ್ ಚಮಚ, ಮೈದಾಹಿಟ್ಟು – 1 1/2 ಟೇಬಲ್ ಚಮಚ, ಉಪ್ಪು – ರುಚಿಗೆ
ನೆನೆಸಿಡಲು: ಸೋಯಾ ಸಾಸ್ – 3/4 ಟೀ ಚಮಚ, ಕಾಳುಮೆಣಸಿನ ಪುಡಿ – 1/4 ಟೀ ಚಮಚ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಟೇಬಲ್ ಚಮಚ
ಚಿಲ್ಲಿ ಮಂಚೂರಿಯನ್ ಸಾಸ್ ತಯಾರಿಸಲು: ಬೆಳ್ಳುಳ್ಳಿ – 4 ಎಸಳು (ಚೆನ್ನಾಗಿ ಹೆಚ್ಚಿದ್ದು), ಈರುಳ್ಳಿ – 1 ಮಧ್ಯಮ ಗಾತ್ರದ್ದು, ದೊಣ್ಣೆಮೆಣಸು – 1/4 ಕಪ್ (ಸಣ್ಣಗೆ ಹೆಚ್ಚಿದ್ದು), ಕೆಂಪು ದೊಣ್ಣೆಮೆಣಸು– 1/4 ಕಪ್ (ಸಣ್ಣಗೆ ಹೆಚ್ಚಿದ್ದು), ಸೋಯಾ ಸಾಸ್ – 1 ಟೇಬಲ್ ಚಮಚ, ವಿನೆಗರ್ – 1 ಟೀ ಚಮಚ, ಚಿಲ್ಲಿ ಸಾಸ್ – 1 1/2 ಚಮಚ, ನೀರು – 2 ಟೇಬಲ್ ಚಮಚ, ಸಕ್ಕರೆ – 1 ಟೀ ಚಮಚ, ಕಾರ್ನ್ಫ್ಲೋರ್ – 3/4 ಚಮಚ (ಅಗತ್ಯವಿದ್ದರೆ)
ತಯಾರಿಸುವ ವಿಧಾನ: ಸಾಸ್ ತಯಾರಿಸಿಕೊಳ್ಳಲು ಮೊದಲು ಸೋಯಾ ಸಾಸ್, ಚಿಲ್ಲಿ ಸಾಸ್, ಸಕ್ಕರೆ ಹಾಗೂ ವಿನೆಗರ್ ಸೇರಿಸಿ ಒಂದೆಡೆ ಇಡಿ.
ಮೀನನ್ನು ಚೆನ್ನಾಗಿ ತೊಳೆದು ಚೌಕಾಕಾರಕ್ಕೆ ಕತ್ತರಿಸಿ. ಅದಕ್ಕೆ ಸೋಯಾ ಸಾಸ್, ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಕಾಳುಮೆಣಸಿನ ಪುಡಿ ಸೇರಿಸಿ ಮಿಶ್ರಣ ಮಾಡಿ ಹತ್ತು ನಿಮಿಷ ಇಡಿ.
ನಂತರ ಎಣ್ಣೆ ಬಿಸಿ ಮಾಡಲು ಇಡಿ. ನಂತರ ಮೀನಿಗೆ ಕಾರ್ನ್ ಫ್ಲೋರ್, ಮೈದಾಹಿಟ್ಟು, ಉಪ್ಪು ಸೇರಿಸಿ. ಸ್ವಲ್ಪ ನೀರು ಚಿಮುಕಿಸಿ ಚೆನ್ನಾಗಿ ಕಲೆಸಿ.
ಹಿಟ್ಟು, ಮೀನಿಗೆ ಹಿಡಿದುಕೊಳ್ಳುವಂತೆ ಗಟ್ಟಿಯಾಗಿ ಕಲೆಸಿ. ನಂತರ ಕಾದ ಎಣ್ಣೆಯಲ್ಲಿ ಮೀನನ್ನು ಕರಿಯಿರಿ. ಚಿಲ್ಲಿ ಮಂಚೂರಿಯನ್ ತಯಾರಿಸುವುದು: ಪ್ಯಾನ್ ವೊಂದಕ್ಕೆ ಬೆಳ್ಳುಳ್ಳಿ ಹಾಕಿ ಪರಿಮಳ ಬರುವವರೆಗೂ ಹುರಿಯಿರಿ.
ಅದಕ್ಕೆ ದೊಣ್ಣೆಮೆಣಸು, ಈರುಳ್ಳಿ ಸೇರಿಸಿ ದೊಡ್ಡ ಉರಿಯಲ್ಲಿ ಗರಿಗರಿಯಾಗುವರೆಗೆ ಎರಡು ನಿಮಿಷ ಹುರಿದುಕೊಳ್ಳಿ.
ಮೊದಲೇ ತಯಾರಿಸಿಕೊಂಡ ಸಾಸ್ ಮಿಶ್ರಣ ಸೇರಿಸಿ, 2 ಚಮಚ ನೀರು ಸೇರಿಸಿ.
ಅದನ್ನು ಚೆನ್ನಾಗಿ ಕುದಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಸಾಸ್ ಕುದಿಯಲು ಆರಂಭಿಸಿದಾಗ ಕರಿದ ಮೀನು ಸೇರಿಸಿ ಮತ್ತೆ ಹುರಿಯಿರಿ.
ದೊಡ್ಡ ಉರಿಯಲ್ಲಿ 2 ನಿಮಿಷ ತಿರುಗಿಸಿ.
ಅದು ಗ್ರೇವಿ ರೂಪಕ್ಕೆ ಬಂದ ಮೇಲೆ ಮತ್ತೆ ಸ್ವಲ್ಪ ಸಾಸ್ ಹಾಗೂ ಕಾರ್ನ್ ಫ್ಲೋರ್ ಸೇರಿಸಿ ಅದಕ್ಕೆ ಅರ್ಧ ಕಪ್ ನೀರು ಹಾಕಿ ಚೆನ್ನಾಗಿ ಬೇಯಿಸಿ.
ನಂತರ ಈರುಳ್ಳಿಯಿಂದ ಅಲಂಕರಿಸಿ.
PublicNext
28/12/2020 03:58 pm