ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಭಾವೈಕ್ಯ ಗಣೇಶನ ದರ್ಶನ ಪಡೆದ ಎಸ್.ಪಿ

ಬೆಳಗಾವಿ: ಬೈಲಹೊಂಗಲ ಪಟ್ಟಣದ ಕಂಠಿಗಲ್ಲಿಯ ಆಲದಕಟ್ಟಿ ಪಕ್ಕೀರಸ್ವಾಮಿ ದರ್ಗಾದಲ್ಲಿ ಹಿಂದು, ಮುಸ್ಲಿಂ ಬಾಂಧವರು ಸೇರಿ ಪ್ರತಿಷ್ಟಾಪನೆ ಮಾಡಿದ ಗಣಪತಿ ಮಂಟಪಕ್ಕೆ ಮತ್ತು ದರ್ಗಾಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ್ ಭೇಟಿ ನೀಡಿದರು.

ಬಳಿಕ ಗಣೇಶ ದರ್ಶನ ಪಡೆದು ಗಣೇಶ ಹಬ್ಬದ ವಿಶೇಷ ಕುರಿತು ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ ಜನತೆಯಲ್ಲಿ ಒಗ್ಗೂಡಿಸಲು ಬಾಲಗಂಗಾಧರ ತಿಲಕ ಅವರು ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪನ ಮೂಲಕ ಜನರಲ್ಲಿ ಏಕತೆ ಭಾವನೆ ಮೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಸ್ವಾತಂತ್ರ್ಯದ ಸಂಗ್ರಾಮದ ಪೂರ್ವದಲ್ಲಿ ನಮ್ಮ ಮೇಲೆ ಬ್ರೀಟಿಷರ ದಬ್ಬಾಳಿಕೆಯನ್ನು ಹೊರದೂಡಿಸಲು, ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಲು ಗೌರಿ ಗಣೇಶ ಹಬ್ಬ ಸಹಕಾರಿಯಾಗಿದ್ದು, ಈ ಒಂದು ಹಬ್ಬವನ್ನು ಮನೆಯ ಜಗತಿ ಮೇಲೆ ಪೂಜಿಸುವ ಗಣೇಶನನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪನ ಮೂಲಕ ಜನತೆಯನ್ನು ಒಗ್ಗೂಡಿಸಿದ ಪರಿಣಾಮವೇ ಇಂದು ಗೌರಿ ಗಣೇಶ ಹಬ್ಬವನ್ನು ಯಾವುದೇ ಹಬ್ಬಗಳನ್ನು ಧರ್ಮ ಜಾತಿ ಸಂಕೋಲೆಗೆ ಸೀಮಿತಗೊಲಿಸದೇ ಜಾತಿ, ಮತ, ಪಂತ ಎನ್ನದೆ ಎಲ್ಲರೂ ಒಗ್ಗೂಡಿ, ನಮ್ಮ ಆಚರಣೆ ಮಾಡುವುದೆ ಈ ಹಬ್ಬದ ಮೂಲ ಉದ್ದೇಶವನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಎಸ್‌ಪಿ ಸಂಜೀವ್ ಪಾಟೀಲ್ ತಿಳಿಸಿದರು.

Edited By :
PublicNext

PublicNext

05/09/2022 08:32 am

Cinque Terre

48.86 K

Cinque Terre

0

ಸಂಬಂಧಿತ ಸುದ್ದಿ