ಚಿತ್ರದುರ್ಗ : ಪೋಕ್ಸೋ ಕಾಯ್ದೆ ಪ್ರಕರಣದಡಿ ಗುರುವಾರ ರಾತ್ರಿ ಮುರುಘಾ ಶರಣರು ಜೈಲು ಸೇರುತ್ತಿದ್ದಂತೆ ಶುಕ್ರವಾರ ಎದೆನೋವು ಎಂದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಜೈಲುವಾಸ ತಪ್ಪಿಸಲು ಮುರುಘಾ ಶ್ರೀ ಎದೆನೋವು ಎಂದು ಕುಸಿದು ಬಿದ್ದಿದ್ದರು. ಈ ವೇಳೆ ಮುರುಘಾ ಶ್ರೀಗಳು ವೀಲ್ ಚೇರ್ ಮೂಲಕ ಆಸ್ಪತ್ರೆ ದಾಖಲಾಗಿದ್ದರು.
ಆದರೆ ಕೋರ್ಟ್ ಅನುಮತಿ ಇಲ್ಲದೆ ಆಸ್ಪತ್ರೆ ಸೇರಿದ ಅವರನ್ನು ಕೋರ್ಟ್ ಗೆ ಕರೆತರಲೇಬೇಕು ಎಂದು ನ್ಯಾಯಾಧೀಶರು ಹೇಳುತ್ತಿದ್ದಂತೆ ಪೊಲೀಸರು ಶ್ರೀಗಳನ್ನು ಕರೆತರಲು ಜಿಲ್ಲಾಸ್ಪತ್ರೆಗೆ ಬಂದಿದ್ದರು. ಈ ವೇಳೆ ವೀಲ್ ಚೇರ್ ನಲ್ಲಿ ಬಂದು ಅಡ್ಮಿಟ್ ಆಗಿದ್ದ ಶ್ರೀಗಳು ನಡೆದುಕೊಂಡೇ ಕೋರ್ಟ್ಗೆ ಹಾಜರಾಗಿದ್ದಾರೆ. ಇದರ ನಡುವೆ ಬೆಂಗಳೂರಿನ ಆಸ್ಪತ್ರೆ ದಾಖಲಿಸುವ ತಯಾರಿ ಕೂಡ ನಡೆದಿತ್ತು. ಇದನ್ನೇಲ್ಲಾ ಗಮನಿಸಿದರೆ ಶ್ರೀಗಳು ಜೈಲುವಾಸ ತಪ್ಪಿಸಲು ಎದೆನೋವು ನಾಟಕವಾಡಿದ್ರಾ ಎನ್ನುವ ಅನುಮಾನ ಹುಟ್ಟಿಕೊಂಡಿದೆ.
PublicNext
03/09/2022 01:34 pm