ಬೆಂಗಳೂರು: ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪೂರ್ ಶರ್ಮಾ ವಿವಾದಾತ್ಮಕ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಭಾರೀ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿದೆ. ಹೀಗಾಗಿ ನಗರದಲ್ಲಿ ಶಾಂತಿ ಕಾಪಾಡಲು ಇಂದು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಧರ್ಮಗುರುಗಳ ಜೊತೆ ಕಮಿಷನರ್ ಪ್ರತಾಪ್ ರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆ ನಡೆಸಿದ್ರು.
ಸುಮಾರು 16 ಮೌಲ್ವಿಗಳು ಪೊಲೀಸರ ಜೊತೆ ಶಾಂತಿ ಕಾಪಾಡುವ ಬಗ್ಗೆ ಮಾತುಕತೆ ನಡೆಸಿದ್ರು. ಸಭೆ ಬಳಿಕ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕೆಲ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ಮುಸ್ಲಿಂ ಧರ್ಮಗುರುಗಳು ಹಾಗೂ ಮತ್ತಿತರರ ಜೊತೆ ಸಭೆ ನಡೆಸಿರೋದಾಗಿ ಹೇಳಿದ್ದಾರೆ.
ಇನ್ನೂ ಇದೇ ಸಂದರ್ಭದಲ್ಲಿ ಮಾತನಾಡಿದ ಮೌಲ್ವಿ ಇಮ್ರಾನ್ ಮಸೂದ್ ಕಾನೂನಿನ ಮೂಲಕ ಹೋರಾಟ ಮಾಡುತ್ತೇವೆ. ಬೀದಿಗಿಳಿದು ಪ್ರತಿಭಟನೆ ಹೋರಾಟ ಮಾಡುವುದಿಲ್ಲ. ಬಿಜೆಪಿ ವಕ್ತಾರೆ ನೂಪೂರ್ ಶರ್ಮ್ ಹೇಳಿಕೆ ಖಂಡನೀಯ ಅಂದ್ರು.
ಒಟ್ಟಿನಲ್ಲಿ ಬಿಜೆಪಿ ವಕ್ತಾರೆ ಹೇಳಿಕೆ ದೇಶವ್ಯಾಪಿ ಸದ್ದು ಮಾಡಿದ್ದು, ಸದ್ಯ ನಡೆಯುತ್ತಿರೋ ಪ್ರತಿಭಟನೆ ಮತ್ತು ಹೋರಾಟ ಎಲ್ಲಿ ಹೋಗಿ ನಿಲ್ಲುತ್ತೋ ಕಾದು ನೋಡಬೇಕು.
ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ, ಬೆಂಗಳೂರು
PublicNext
11/06/2022 06:46 pm