ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ತಲಕಾವೇರಿಯಲ್ಲಿ ಇಂದು ಪವಿತ್ರ ತೀರ್ಥೋದ್ಭವ;ಪುಣ್ಯ ಸ್ನಾನಕ್ಕಿಲ್ಲ ಅವಕಾಶ

ಜಿಲ್ಲೆಯ ಮಡಿಕೇರಿ ತಾಲೂಕಿನ ತಲಕಾವೇರಿಯಲ್ಲಿ ಇಂದು ಮಧ್ಯಾಹ್ನ ಜೀವನದಿ ದರ್ಶನ ನೀಡಲಿದ್ದಾಳೆ. ತೀರ್ಥೋದ್ಭವ ವೇಳೆ ಪ್ರಧಾನ ಅರ್ಚಕ ಗುರುರಾಜಾಚಾರ್​ ನೇತೃತ್ವದಲ್ಲಿ 6 ಅರ್ಚಕರಿಂದ ಪೂಜೆ ಪುನಸ್ಕಾರಗಳು ನೆರವೇರಲಿದೆ‌.

ಮಕರ ಲಗ್ನದಲ್ಲಿ ತೀರ್ಥರೂಪಿಣಿಯಾಗಿ ಕಾವೇರಿ ದರ್ಶನ ನೀಡಲಿದ್ದು.ಬೆಳಗ್ಗೆ 11ರ ಬಳಿಕ ಕುಂಡಿಕೆ ಬಳಿ ಭಕ್ತರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಕೊವಿಡ್​-19 ಹಿನ್ನೆಲೆ ಈ ಬಾರಿ ಹಲವು ನಿರ್ಬಂಧಗಳನ್ನು ಹೇರಿದ್ದು ತೀರ್ಥೋದ್ಭವ ವೇಳೆ ಭಕ್ತರು ಕಲ್ಯಾಣಿಗೆ ಇಳಿದು ಪುಣ್ಯ ಸ್ನಾನಕ್ಕೂ ಅವಕಾಶವಿರುವುದಿಲ್ಲ.

ಭಕ್ತರಿಗೆ ತೀರ್ಥ ವಿತರಣೆಗೆ ಎಲ್ಲಾ ರೀತಿಯ ವಿಶೇಷ ವ್ಯವಸ್ಥೆ ಮಾಡಲಾಗಿದ್ದು,ಭದ್ರತೆಗಾಗಿ ಕೆ.ಎಸ್.ಆರ್ .ಪಿ ಡಿ.ಆರ್​ ಪೊಲೀಸರ ನಿಯೋಜನೆ ಮಾಡಲಾಗಿದೆ.

Edited By : Shivu K
PublicNext

PublicNext

17/10/2021 01:00 pm

Cinque Terre

60.37 K

Cinque Terre

0