ಕೊಪ್ಪಳ:ಕೋವಿಡ್-ಒಮಿಕ್ರಾನ್ ಅಟ್ಟಹಾಸ ಮೆರೆಯುತ್ತಿದೆ. ಇದರಿಂದ ಕೊಪ್ಪಳದ ಗವಿಮಠದ ಜಾತ್ರಾ ಮಹೋತ್ಸವ ಗೊಂದಲದಲ್ಲಿಯೇ ಇದೆ. ಸರ್ಕಾರ ಬೇಡ ಅಂತಲೇ ಹೇಳಿದೆ. ಆಚರಣೆಗಾದ್ರೂ ಜಾತ್ರೆ ಮಾಡ್ತೀವಿ ಅಂತವ್ರೆ ಸಚಿವ ಹಾಲಪ್ಪ ಅಚಾರ್.
ಸದ್ಯದ ಪರಿಸ್ಥಿತಿಯಲ್ಲಿ ಜಾತ್ರೆ ಮಾಡಲೇ ಬಾರದು. ಎಲ್ಲೆಡೆ ಕೋವಿಡ್ ಸೋಂಕು ಹರಡುತ್ತಿದೆ. ಒಮಿಕ್ರಾನ್ ಕೂಡ ಕಾಡ್ತಿದೆ. ಹೀಗಿರೋವಾಗ ಜಾತ್ರಾ ಮಹೋತ್ಸವಕ್ಕೆ ಅವಕಾಶ ಕೊಡೋದಿಲ್ಲ ಅಂತಲೇ ಕೊಪ್ಪಳದ ಡಿಸಿ ಎಸ್.ವಿಕಾಸ್ ಕಿಶೋರ್ ಈಗಾಗಲೇ ಹೇಳಿ ಬಿಟ್ಟಿದ್ದಾರೆ.
ಕಂದಾಯ ಸಚಿವ ಆರ್. ಅಶೋಕ್ ಕೂಡ ಜಾತ್ರೆ ಮಾಡಲು ಸರ್ಕಾರ ಅವಕಾಶ ಕೊಟ್ಟಿಲ್ಲ. ಇದಕ್ಕೆ ಯಾರಿಗೂ ಅವಕಾಶ ಇಲ್ಲವೇ ಇಲ್ಲ ಅಂತಲೇ ಹೇಳಿದ್ದಾರೆ.
ಆದರೆ, ಗಣಿ ಹಾಗೂ ಭೂವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ಇದನ್ನೆ ಲೆಕ್ಕಕ್ಕೆ ತೆಗೆದುಕೊಂಡಂತಿಲ್ಲ. ಆಚರಣೆಗಾದ್ರು ಈ ಜಾತ್ರೆ ಮಾಡಿಯೇ ಮಾಡುತ್ತೇವೆ. ಕೋವಿಡ್ ಮಾರ್ಗಸೂಚಿ ಅನುಸರಿಸಿಯೇ ಜಾತ್ರೆ ಮಾಡುತ್ತೇವೆ ಅಂತಲೇ ಹೇಳಿದ್ದಾರೆ. ಇದರಿಂದ ಜಾತ್ರೆ ನಡೆಯುತ್ತದೆಯೇ ಇಲ್ಲವೇ ಅನ್ನೋ ಗೊಂದಲ ಜನರಲ್ಲಿ ಈಗಲೇ ಮೂಡಿದೆ.
PublicNext
12/01/2022 10:51 am