ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗ್ರಾಹಕರಿಗೆ ಬಿಗ್ ಶಾಕ್ : ಗಗನಕ್ಕೇರಿದ `ಈರುಳ್ಳಿ' ಬೆಲೆ

ಬೆಂಗಳೂರು : ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈರುಳ್ಳಿ ಬೆಳೆ ಹಾನಿಯಾದ ಪರಿಣಾಮ ಈರುಳ್ಳಿ ಬೆಲೆ ಏರಿಕೆಯಾಗಿದ್ದು KG ಈರುಳ್ಳಿ ಗೆ 75 ರೂ. ತಲುಪಿದೆ.

ಇನ್ನು ಮಾರುಕಟ್ಟೆಯಲ್ಲಿಗುಣಮಟ್ಟದ ಈರುಳ್ಳಿ ಪೂರೈಕೆ ಕೊರತೆ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಳೆದ ವರ್ಷ ಈರುಳ್ಳಿ ದರ ಕೆಜಿಗೆ 100 ರ ಗಡಿದಾಟಿ 200 ರೂ. ಸಮೀಪಕ್ಕೆ ತಲುಪಿತ್ತು. ಈಗ ಮಳೆಯ ಪರಿಣಾಮ ಅತಿವೃಷ್ಟಿಯಿಂದ ಹಸಿ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದೆ. ಆದರೆ ಇದು ಬೇಗನೆ ಕೊಳೆಯುವ ಕಾರಣ ದಾಸ್ತಾನು ಮಾಡಲು ಸಾಧ್ಯವಾಗುತ್ತಿಲ್ಲ. ಹಾಪ್ ಕಾಮ್ಸ್ ನಲ್ಲಿ ಕೆಜಿ ಈರುಳ್ಳಿ ಬೆಲೆ 75 ರೂ. ಇದೆ. ಸಧ್ಯ ಈರುಳ್ಳಿ ಬೆಲೆಯಲ್ಲಿ ಏರಿಕೆಯಾಗುತ್ತಿರುವುದರಿಂದ ಗ್ರಾಹಕರು ಶಾಕ್ ಆಗಿದ್ದಾರೆ.

Edited By :
PublicNext

PublicNext

16/10/2020 08:30 am

Cinque Terre

127.56 K

Cinque Terre

29

ಸಂಬಂಧಿತ ಸುದ್ದಿ