ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂದ್‌ ವೇಳೆ ಕೋವಿಡ್ ನಿಯಮ ಉಲ್ಲಂಘಿಸಿದ್ರೆ ಎನ್‌ಡಿಎಂಎ ಕಾಯ್ದೆ ಅಡಿ ಕೇಸ್‌ – ಕಮಲ್ ಪಂತ್ ಎಚ್ಚರಿಕೆ

ಬೆಂಗಳೂರು: ಕರ್ನಾಟಕ ಬಂದ್‌ ವೇಳೆ ಕೋವಿಡ್-೧೯ ನಿಯಮ ಉಲ್ಲಂಘಿಸಿದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ (ಎನ್‌ಡಿಎಂಎ) ಅಡಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಂದ್ ಸಂಬಂಧ ನಾವು ಯಾರಿಗೂ ಅನುಮತಿಯನ್ನು ನೀಡಿಲ್ಲ. ನಮ್ಮಿಂದ ಯಾರೂ ಅನುಮತಿಯನ್ನು ಪಡೆದಿಲ್ಲ. ನಾವು ಬಂದೋಬಸ್ತ್ ಮಾಡಿಕೊಂಡಿದ್ದೇವೆ. ಬಲವಂತವಾಗಿ ಬಂದ್ ಮಾಡಿಸುವಂತಿಲ್ಲ. ಅಂಗಡಿ ಮುಂಗಟ್ಟುಗಳನ್ನ ಮುಚ್ಚಿಸಲು ಯತ್ನಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಕೆಲವರಿಂದ ಬಾಂಡ್ ಬರೆಸಿಕೊಳ್ಳುತ್ತೇವೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾದರೆ ಅವರೇ ಹೊಣೆ ಹೊರಬೇಕಾಗುತ್ತದೆ ಎಂದು ಹೇಳಿದರು.

47 ಕೆಎಸ್‌ಆರ್‌ಪಿ, 26 ಸಿಎಆರ್ ತುಕಡಿ ಸೇರಿದಂತೆ ಬೆಂಗಳೂರು ನಗರದ ಎಲ್ಲಾ ಪೊಲೀಸರನ್ನು ನಾಳೆಯ ಬಂದೋಬಸ್ತ್ ಗೆ ನಿಯೋಜನೆ ಮಾಡುತ್ತೇವೆ. ನಗರದ ಬೇರೆ ಬೇರೆ ಕಡೆಗಳಿಂದ ಹೊರಡುವ ಪ್ರತಿಭಟನಾ ಮೆರವಣಿಗೆಗೆ ಅವಕಾಶ ಇಲ್ಲ. ಟ್ರಾಫಿಕ್ ಜಾಮ್ ಆಗುವ ಹಿನ್ನೆಲೆ ಮೆರವಣಿಗೆಗೆ ಅವಕಾಶ ನೀಡಿಲ್ಲ ಎಂದು ತಿಳಿಸಿದರು.

Edited By : Vijay Kumar
PublicNext

PublicNext

27/09/2020 05:16 pm

Cinque Terre

151.81 K

Cinque Terre

1

ಸಂಬಂಧಿತ ಸುದ್ದಿ