ಇಸ್ಲಾಮಾಬಾದ್: ಈಗಾಗಲೇ ಜೈಲಿನಲ್ಲಿ ಇರುವ ಮುಂಬೈ ದಾಳಿಯ ರೂವಾರಿ, ಪಾಕಿಸ್ತಾನದ ಮಹಾ ಉಗ್ರ ಹಫೀಜ್ ಸಯೀದ್‌ಗೆ ಮತ್ತೊಂದು ಶಿಕ್ಷೆ ಎದುರಾಗಿದೆ. ಹಫೀಜ್ ಸಯೀದ್‌ಗೆ ಪಾಕಿಸ್ತಾನದ ಆ್ಯಂಟಿ ಟೆರರ್ ಕೋರ್ಟ್ 31 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ. ಅಷ್ಟೇ ಅಲ್ಲದೆ ಜೊತೆಗೆ 3 ಲಕ್ಷದ 40 ಸಾವಿರ ದಂಡ ವಿಧಿಸಿದೆ.
ಹಫೀಜ್ ಸಯೀದ್ನನ್ನ ಲಾಹೋರ್ನ ಕೋಟ್ ಲಖ್ಪತ್ ಜೈಲಿನಲ್ಲಿ ಇರಿಸುವಂತೆ ಸೂಚಿಸಿದೆ. ಲಷ್ಕರ್ -ಎ- ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ಹಲವು ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿರೋದಷ್ಟೇ ಅಲ್ಲ, ಸಾಕಷ್ಟು ಆಸ್ತಿಯನ್ನೂ ಪಾಕಿಸ್ತಾನದಲ್ಲಿ ಹೊಂದಿದ್ದಾನೆ. ಇದೀಗ ಆತನಿಗೆ ಸೇರಿದ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿದೆ.
PublicNext
08/04/2022 07:35 pm