ಲಂಡನ್: ದುಬೈ ದೊರೆ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್(72) ಅವರು ತಮ್ಮ ಆರನೇ ಹೆಂಡತಿ ಹಯಾ ಬಿಂಟ್ ಅಲ್ ಹುಸೇನ್(47) ಅವರಿಗೆ ವಿಚ್ಛೇದನ ನೀಡಲು ಅರ್ಜಿ ಸಲ್ಲಿಸಿದ್ದರು. ಬ್ರಿಟನ್ ಹೈಕೋರ್ಟ್ ಈ ಅರ್ಜಿಯನ್ನು ಇತ್ಯರ್ಥಗೊಳಿಸಿ ವಿಚ್ಛೇದನ ಮಂಜೂರು ಮಾಡಿದೆ. ಹಾಗೂ ವಿಚ್ಛೇದಿತ ಪತ್ನಿಗೆ ದುಬೈ ದೊರೆ 5,527 ಕೋಟಿ ರೂ. ಜೀವನಾಂಶ ಕೊಡಬೇಕು ಎಂದು ತೀರ್ಪು ನೀಡಿದೆ.
ಇದರಲ್ಲಿ 2,521 ಕೋಟಿ ರೂ.ಗಳನ್ನು ಪೂರ್ಣವಾಗಿ ಒಂದು ಮೊತ್ತದಲ್ಲಿ ಹಯಾಗೆ ಪಾವತಿಸಬೇಕು ಎಂದು ಹೇಳಿದೆ. ರಶೀದ್ ಅವರ ಪತ್ನಿಯರ ಪೈಕಿ ಹಯಾ ಕಿರಿಯವರಾಗಿದ್ದು, ದಂಪತಿಗೆ ಅಲ್ ಜಲಿಲಿಯಾ(14) ಜಯದ್(9) ಎಂಬ ಇಬ್ಬರು ಮಕ್ಕಳಿದ್ದಾರೆ.ಮಕ್ಕಳ ಶಿಕ್ಷಣಕ್ಕಾಗಿ 96 ಕೋಟಿ ರೂ., ಅವರ ಜವಾಬ್ದಾರಿ ನಿಭಾಯಿಸಲು 112 ಕೋಟಿ ರೂ. ವಾರ್ಷಿಕವಾಗಿ ನೀಡಬೇಕಿದೆ.
ಇತರೆ ಅಗತ್ಯತೆಗಳಿಗೆ 2,907 ಕೋಟಿ ರೂ.ಗಳನ್ನು ಬ್ಯಾಂಕ್ ಗ್ಯಾರಂಟಿಯಾಗಿ ನೀಡಬೇಕಾಗುತ್ತದೆ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ. ಬ್ರಿಟನ್ ಇತಿಹಾಸದಲ್ಲಿ ಇದು ಅತ್ಯಂತ ದುಬಾರಿ ವಿಚ್ಛೇದನವಾಗಿದೆ ಎಂದು ಹೇಳಲಾಗಿದೆ.
PublicNext
22/12/2021 07:32 pm