ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಸ್ತ್ರೀಯ ನೃತ್ಯವನ್ನು ಅರ್ಧಕ್ಕೆ ನಿಲ್ಲಿಸಿದ ನ್ಯಾಯಾಧೀಶ : ಕಣ್ಣೀರಿಟ್ಟ ಕಲಾವಿದೆ

ಕೊಚ್ಚಿ: ಕೇರಳದ ಸರ್ಕಾರಿ ಮೋಯನ್ ಎಲ್ ಪಿ ಶಾಲೆಯಲ್ಲಿ ಮೋಹಿನಿಯಾಟ್ಟಂನ ಖ್ಯಾತ ನೃತ್ಯಪಟು ಡಾ.ನೀನಾ ಪ್ರಸಾದ್ ನೃತ್ಯ ಕಾರ್ಯಕ್ರಮ ಅರ್ಧಕ್ಕೆ ನಿಂತಿದೆ. ಹೌದು ಈ ಶಾಲೆಯ ಹಿಂಭಾಗದಲ್ಲಿ ಜಿಲ್ಲಾ ನ್ಯಾಯಾಧೀಶ ಡಾ.ಕಲಾಂ ಪಾಷಾ ಅವರ ಮನೆಯಿದೆ. ಈ ಕಾರ್ಯಕ್ರಮದಿಂದ ನ್ಯಾಯಾಧೀಶರಿಗೆ ಕಿರಿಕಿರಿಯಾಗಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಪೊಲೀಸರನ್ನು ಕಳುಹಿಸಿ ಕಾರ್ಯಕ್ರಮವನ್ನು ನಿಲ್ಲಿಸಿದ್ದಾರೆ.

ರಂಗಮಂದಿರಕ್ಕೆ ನುಗ್ಗಿದ ಪೊಲೀಸರ ನಡೆ ಕಂಡು ಕಲಾವಿದೆ ಸೇರಿದಂತೆ ನೆರೆದಿದ್ದ ಜನ, ಕಾರಣ ಕೇಳಿ ಶಾಕ್ ಆಗಿದ್ದಾರೆ.

ಈ ಬಗ್ಗೆ ಕಲಾವಿದೆ ಡಾ.ನೀನಾ ಪ್ರಸಾದ್ ಫೇಸ್ ಬುಕ್ ನಲ್ಲಿ ಅಳಲು ತೋಡಿಕೊಂಡಿದ್ದಾರೆ. ನನಗೆ ದುಃಖ ಮಡುಗಟ್ಟಿದೆ, ಕಣ್ಣೀರು ನಿಲ್ಲುತ್ತಿಲ್ಲ.. ನನ್ನ ಮೋಹಿನಿಯಾಟ್ಟಂ ಪ್ರದರ್ಶನವನ್ನು ಮಧ್ಯದಲ್ಲೇ ನಿಲ್ಲಿಸುವಂತೆ ಹೇಳುವುದು ನನಗೆ ಮಾಡಿದ ಅವಮಾನ ಮಾತ್ರವಲ್ಲ, ಇದು ಕೇರಳದ ಕಲೆ ಮತ್ತು ಸಂಸ್ಕೃತಿಗೆ ಮಾಡಿದ ಅವಮಾನ ಎಂದಿದ್ದಾರೆ.

ಸಂಗೀತ ಜೋರಾಗಿ ನಡೆದಿದೆ ಎಂದು ನ್ಯಾಯಾಧೀಶರು ಪೊಲೀಸರಿಗೆ ದೂರು ನೀಡಿದ್ದರಂತೆ. ಶಾಸ್ತ್ರೀಯ ನೃತ್ಯದಲ್ಲಿ ಸಂಗೀತ ಯಾವತ್ತೂ ಜೋರಾಗಿ ಇರುವುದಿಲ್ಲ. ಅಷ್ಟೇ ಅಲ್ಲದೇ, ನನ್ನದು ಏಕವ್ಯಕ್ತಿ ಪ್ರದರ್ಶನವಾಗಿದ್ದು, ಪಿಟೀಲು, ಮೃದಂಗದಂತಹ ಮೃದುವಾದ ಸಂಗೀತ ವಾದ್ಯಗಳನ್ನು ಬಳಸಲಾಗಿತ್ತು. ಆದರೆ ಜೋರಾದ ಸಂಗೀತ ಎಂದು ಹೇಳಿ ನೃತ್ಯ ನಿಲ್ಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

Edited By : Nirmala Aralikatti
PublicNext

PublicNext

23/03/2022 11:00 pm

Cinque Terre

58.14 K

Cinque Terre

13