ದಾವಣಗೆರೆ: ಉಕ್ರೇನ್ ನಲ್ಲಿ ಸಿಲುಕಿದ್ದ ನಗರದ ಭಗತ್ ಸಿಂಗ್ ನಗರ ವಾಸಿ ಶೌಖತ್ ಅಲಿ ಪುತ್ರ ಹಾಗೂ ಎಂಬಿಬಿಎಸ್ ವಿದ್ಯಾರ್ಥಿ ಮಹ್ಮದ್ ಹಬೀಬ್ ಅಲಿ ತವರಿಗೆ ಸುರಕ್ಷಿತವಾಗಿ ಮರಳಿದ್ದಾರೆ. ನಮ್ಮನ್ನು ಕಾಪಾಡಿದ್ದು ಭಾರತದ ತ್ರಿವರ್ಣ ಧ್ವಜ ಎಂದು ಹೆಮ್ಮೆಯಿಂದ ಹೇಳಿದ್ದಾರೆ.
ಅಲಿ ಹೇಳುವ ಪ್ರಕಾರ ರಷ್ಯಾ ಹಾಗೂ ಉಕ್ರೇನ್ ನವರಿಗೆ ಭಾರತ ಅಂದರೆ ತುಂಬಾನೇ ಇಷ್ಟ. ಇಲ್ಲಿನ ಜನರಿಗೆ ಅವರೇ ಸಹಾಯ ಮಾಡುತ್ತಿದ್ದಾರೆ. ಬೇರೆ ರಾಷ್ಟ್ರದವರಿಗೆ ಹೋಲಿಸಿದರೆ ಮೊದಲು ನಮ್ಮ ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದಾರೆ. ಕನ್ನಡಿಗರೂ ಸೇರಿದಂತೆ ಸಾವಿರಾರು ಭಾರತೀಯರು ಅಲ್ಲಿ ಇದ್ದು, ಇಂಟರ್ ನೆಟ್, ಮೊಬೈಲ್ ಸಂಪರ್ಕ ಸಾಧ್ಯವಾಗದ ಕಾರಣ ಕೆಲವರು ಮಾತನಾಡಲು ಸಿಗುತ್ತಿಲ್ಲ. ಕಳೆದ ಎರಡು ದಿನಗಳ ಹಿಂದೆ ಸಂಪರ್ಕಕ್ಕೆ ಬಂದಿದ್ದರು. ಆದ್ರೆ ಈಗ ಸಾಧ್ಯ ಆಗುತ್ತಿಲ್ಲ. ಎಲ್ಲರೂ ಸುರಕ್ಷಿತವಾಗಿ ಬರಬೇಕೆಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದ್ದಾನೆ.
ಇನ್ನು ತನ್ನ ಪುತ್ರ ಸುರಕ್ಷಿತವಾಗಿ ಮರಳಿದ್ದಕ್ಕೆ ಅಲಿ ತಂದೆ ಶೌಖತ್ ಅಲಿ ಸೇರಿದಂತೆ ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಹರ್ಷ ವ್ಯಕ್ತಪಡಿಸಿದ್ದಾರೆ. ತನ್ನ ಮಗ ಉಕ್ರೇನ್ ನಲ್ಲಿ ಸಿಲುಕಿಕೊಂಡಾಗ ಭಯ ಆಗಿತ್ತು. ಈಗ ಖುಷಿಯಾಗಿದೆ ಎಂದು ಶೌಖತ್ ಅಲಿ ಹೇಳಿದ್ದಾರೆ.
" ಭಾರತ ಧ್ವಜ ಕಂಡರೆ ಉಕ್ರೇನ್ ಹಾಗೂ ರಷ್ಯಾದವರು ತುಂಬಾನೇ ಗೌರವ ಕೊಡುತ್ತಿದ್ದರು. ಯಾವ ಸಮಸ್ಯೆಯನ್ನು ಮಾಡುತ್ತಿರಲಿಲ್ಲ. ಬದಲಾಗಿ ನಿಮಗೇನೂ ಮಾಡುವುದಿಲ್ಲ. ಆತಂಕಕ್ಕೆ ಒಳಗಾಗಬೇಡಿ ಎಂಬ ಮಾತನಾಡಿ ಧೈರ್ಯ ತುಂಬಿದರು. ಭಾರತ ಧ್ವಜ ನೋಡಿದಾಕ್ಷಣ ರಷ್ಯಾ ಹಾಗೂ ಉಕ್ರೇನ್ ನ ಸೈನಿಕರು ಏನು ಮಾಡುತ್ತಿರಲಿಲ್ಲ. ನಾವಿದ್ದ ಹಾಸ್ಟೆಲ್ ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾಕಲಾಗಿತ್ತು. ಹೀಗಾಗಿ, ಉಕ್ರೇನ್ ಹಾಗೂ ರಷ್ಯಾ ಸೈನಿಕರೇ ನಮಗೆ ಭದ್ರತೆ ನೀಡಿದ್ದರು. ಇನ್ನು, ಭಾರತೀಯರನ್ನ ಬಿಟ್ಟು ಬೇರೆ ದೇಶದವರಿಗೆ ಧ್ವಜ ಹಾಕಲು ಅನುಮತಿ ಕೊಟ್ಟಿರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.
PublicNext
01/03/2022 12:58 pm