ಚಿಕ್ಕಬಳ್ಳಾಪುರ: ದುಷ್ಕರ್ಮಿಗಳು ರಾತ್ರೋರಾತ್ರಿ ಜೆಸಿಬಿಯಿಂದ ಕೆರೆ ಕಟ್ಟೆಯನ್ನು ಒಡೆದಿರುವುದರಿಂದ ರೈತರ ಸಾವಿರಾರು ಎಕರೆಗೆ ನೀರು ನುಗ್ಗಿ ಬೆಳೆ ನಷ್ಟವಾದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕೊಳವನಹಳ್ಳಿ ಗ್ರಾಮದ ಬಳಿ ನಡೆದಿದೆ.
ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕೆರೆ ತುಂಬಿದೆ. ಕೆಲವು ಪ್ರಭಾವಿ ವ್ಯಕ್ತಿಗಳ ಲೇಔಟ್ ಹಾಗೂ ಜಮೀನುಗಳಲ್ಲಿ ನೀರು ನಿಂತಿದ್ದ ಕಾರಣ ರಾತ್ರೋರಾತ್ರಿ ಜೆಸಿಬಿಯಿಂದ ಕೆರೆ ಕಟ್ಟೆ ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ಇನ್ನು ರೈತರ ಜಮೀನುಗಳಲ್ಲಿ ತರಕಾರಿ, ವಿಧವಿಧವಾದ ಹೂ ಬೆಳೆಗಳು, ದ್ರಾಕ್ಷಿ ಸೇರಿದಂತೆ ಅಪಾರ ಪ್ರಮಾಣದಲ್ಲಿ ಬೆಳೆಗಳು ನಷ್ಟವಾಗಿದೆ. ಅದು ಅಲ್ಲದೇ ರೈತರ ಜಮೀನುಗಳಲ್ಲಿ 5ರಿಂದ 6 ಅಡಿಯಷ್ಟು ನೀರು ನಿಂತಿದೆ. ನೀರನ್ನು ಯಾವ ರೀತಿ ಹೊರ ಹಾಕಬೇಕು ಎಂಬ ಚಿಂತೆಯಲ್ಲಿ ರೈತರಿದ್ದಾರೆ. ಇಷ್ಟೆಲ್ಲಾ ಆದರೂ ಸಹ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬಾರದೆ ರೈತ ವಿಚಾರದಲ್ಲಿ ಗಮನ ಹರಿಸದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
PublicNext
08/09/2022 03:28 pm