ಬೆಂಗಳೂರು: ಕಳೆದ 2 ವರ್ಷ ಗಳಿಂದ ಕೋವಿಡ್ ಇತ್ತು. ಇದರಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಕೂಲ್ ಗಳು ಓಪನ್ ಆಗಿರಲಿಲ್ಲ. ಇದೀಗ ಕೋವಿಡ್ ಕಡಿಮೆಯಾಗಿದೆ. ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಹಾಗಂತ ಏಕಾಏಕಿ ಮಕ್ಕಳ ಪೋಷಕರಿಗೆ ಈ ರೀತಿ ಶಾಕ್ ನೀಡೋದಾ! ಖಾಸಗಿ ಶಾಲಾಡಳಿತ ಮಂಡಳಿ.
ರಾಜ್ಯದಲ್ಲಿ ಶಾಲೆಗಳು ಆರಂಭವಾಗಿ ತಿಂಗಳು ಕಳೆದೇ ಹೋಯ್ತು. ಒಂದೆಡೆ ಫೀಸ್ ಹೆಚ್ಚಳ ತಲೆಬಿಸಿ... ಹಣ ಹೊಂದಿಸೋ ಟೆನ್ಷನ್ ನಡುವೆ ಖಾಸಗಿ ಶಾಲಾಡಳಿತ ಮಂಡಳಿ ಪೋಷಕರಿಗೆ ಹೊಸ ತಲೆನೋವು ತರಿಸುವಂತೆ ಮಾಡಿದೆ.
ತೈಲ ಬೆಲೆ, ಸರ್ವಿಸ್ ಚಾರ್ಜ್, ಇನ್ಶುರೆನ್ಸ್ ಸೇರಿದಂತೆ ವಿವಿಧ ದರ ಏರಿಕೆ ಹಿನ್ನೆಲೆಯಲ್ಲಿ 10% - 20% ಖಾಸಗಿ ಶಾಲೆಗಳು ತಮ್ಮ ವಾಹನ ( ಸ್ಕೂಲ್ ಬಸ್ ) ದರ ಏರಿಕೆ ಮಾಡಿದೆ. ಈ ದರ ಏರಿಕೆಯ ಬಗ್ಗೆ ಆಯಾ ಶಾಲಾಡಳಿತ ಮಂಡಳಿಗೆ ಬಿಟ್ಟಿದೆ.
ಇನ್ನು, ಪೋಷಕರಿಗೆ ಇದು ಹೊರೆಯಾಗಿದೆ. ಅದರಲ್ಲೂ ಮಧ್ಯಮ ಹಾಗೂ ಕೆಳ ವರ್ಗದ ಜನರ ಬದುಕು ಮತ್ತಷ್ಟು ದುಸ್ತರವಾಗಲಿದೆ.
PublicNext
06/07/2022 08:37 pm