ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬುಲಂದ್ ಶಹರ್(ಉತ್ತರ ಪ್ರದೇಶ): ಬಂಧಿತ ಅಪ್ಪನಿಗಾಗಿ ಮಗಳ ಹೋರಾಟ: ಮನಮುಟ್ಟಿದ ಉತ್ತರಪ್ರದೇಶದ ಘಟನೆ

ಬುಲಂದ್ ಶಹರ್(ಉತ್ತರ ಪ್ರದೇಶ): ಅನಧಿಕೃತ ಪಟಾಕಿ ಮಾರಾಟ ಮಾಡಿದ ವ್ಯಾಪಾರಿಯೊಬ್ಬನನ್ನು ಉತ್ತರ ಪ್ರದೇಶದ ಖುರ್ಜಾ ನಗರದ ಪೊಲೀಸರು ಬಂಧಿಸಿದ್ದರು. ಅಪ್ಪನನ್ನು ಬಂಧಿಸಿದ ಪೊಲೀಸರಿಗೆ ಮನವಿ ಮಾಡಿದ್ದ ಪುಟಾಣಿ ಮಗಳು ದಿಂಪಿ ಅಗರವಾಲ, ತನ್ನ ಅಪ್ಪನನ್ನು ಬಿಟ್ಟುಬಿಡಿ ಎಂದಿದ್ದಳು. ಪೊಲೀಸ್ ಜೀಪಿನಲ್ಲಿ ತನ್ನ ಅಪ್ಪನನ್ನು ಕರೆದೊಯ್ಯುವಾಗ ಆಕೆ ಬಿಟ್ಟುಬಿಡುವಂತೆ ಗೋಗರೆದಿದ್ದಳು‌. ಪೊಲೀಸ್ ಜೀಪಿಗೆ ತನ್ನ ಹಣೆ ಚಚ್ಚಿಕೊಂಡಿದ್ದಳು. ಇದರ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.

ಈ ವಿಷಯ ತಿಳಿದ ಸಿಎಂ ಯೋಗಿ ಆದಿತ್ಯನಾಥ್ ಬಾಲಕಿಯ ತಂದೆಯನ್ನು ಬಿಡುಗಡೆ ಮಾಡುವಂತೆ ತಮ್ಮ ಆಪ್ತ ಸಹಾಯಕನ ಮೂಲಕ ಹೇಳಿಸಿದ್ದಾರೆ. ಸಿಎಂ ಆದೇಶದಂತೆ ಖುರ್ಜಾ ಪೊಲೀಸರು ಪಟಾಕಿ ವ್ಯಾಪಾರಸ್ಥನನ್ನು ಬಿಡುಗಡೆ ಮಾಡಿದ್ದಾರೆ‌. ಸ್ವತಃ ಪೊಲೀಸ್ ಅಧಿಕಾರಿಗಳು ಆ ಬಾಲಕಿಯ ಮನೆಗೆ ಹೋಗಿ ದೀಪಾವಳಿ ಹಬ್ಬಕ್ಕೆ ಸಿಹಿತಿಂಡಿಯ ಬಾಕ್ಸ್ ಕೊಟ್ಟು ಹಬ್ಬ ಆಚರಿಸಿದ್ದಾರೆ.

ಅಪ್ಪನೊಂದಿಗೆ ಖುಶಿಯಿಂದ ದಿಂಪಿ ಅಗರವಾಲ್ ದೀಪಾವಳಿ ಆಚರಿಸಿದ್ದಾಳೆ. ಹಾಗೂ ಇದೇ ವೇಳೆ ಆಕೆ ಸ್ಥಳೀಯ ಮಾಧ್ಯಮಗಳಿಗೆ ನೀಡಿದ ಹೇಳಿಕೆ ಈಗ ಟ್ವಿಟರ್ ನಲ್ಲಿ ಹರಿದಾಡುತ್ತಿದೆ.

Edited By : Manjunath H D
PublicNext

PublicNext

15/11/2020 05:00 pm

Cinque Terre

113.92 K

Cinque Terre

16

ಸಂಬಂಧಿತ ಸುದ್ದಿ