ಬಳ್ಳಾರಿ: ಸಿಎಂ ಬಸವರಾಜ್ ಬೊಮ್ಮಾಯಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಸಂಡೂರು ತಾಲೂಕಿನ ಜಿಂದಾಲ್ ಏರ್‌ಪೋರ್ಟ್ ಬಳಿ ತುರ್ತು ಭೂಸ್ಪರ್ಶವಾಗಿದೆ.
ರಾಯಚೂರಿನಿಂದ ಹೊಸಪೇಟೆಗೆ ಸಿಎಂ ಬೊಮ್ಮಾಯಿ ಆಗಮಿಸುತ್ತಿದ್ದರು. ಬಳ್ಳಾರಿಯ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯ ಹಿನ್ನೆಲೆ ಹೆಲಿಕಾಪ್ಟರ್ ತುರ್ತುಭೂಸ್ಪರ್ಶ ಮಾಡಲಾಗಿದೆ. ಹೀಗಾಗಿ ಎಸ್ಕಾರ್ಟ್ ಸಿಎಂ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ ಅವರನ್ನು ಕರೆತರಲು ತೆರಳಿದ್ದಾರೆ. ಸಿಎಂ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ ರಾತ್ರಿ ಕಮಲಾಪುರದ ಈವಲ್ ಬ್ಯಾಕ್ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
PublicNext
11/10/2022 09:21 pm