ಲಕ್ನೋ: ಉತ್ತರ ಪ್ರದೇಶದ ರಾಯ್ ಬರೇಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯ ಅಧಿಕಾರಿಗಳಿಗೆ ಟಿ-ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿ ಬರದಂತೆ ಆದೇಶ ನೀಡಲಾಗಿದೆ. ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಶಿವಕಾಂತ್ ದ್ವಿವೇದಿ ಹೊರಡಿಸಿರುವ ಈ ಆದೇಶವು ಭಾರಿ ಚರ್ಚೆಗೆ ಕಾರಣವಾಗಿದೆ.
ಸರ್ಕಾರಿ ನೌಕರರು ಹಾಗೂ ಇತರೆ ಅಧಿಕಾರಿಗಳು ಫಾರ್ಮಲ್ ಡ್ರೆಸ್ ಧರಿಸಿಯೇ ಬರಬೇಕು. ಹೊರಗಡೆ ಯಾವುದೇ ರೀತಿಯ ಬಟ್ಟೆಗಳನ್ನ ಧರಿಸಲು ಅಭ್ಯಂತರ ಇಲ್ಲ. ಅಧಿಕಾರಿಗಳು ಯಾವುದೇ ಕಾರಣಕ್ಕೂ ಡ್ರೆಸ್ ಕೋಡ್ ಉಲ್ಲಂಘನೆ ಮಾಡುವಂತಿಲ್ಲ. ಒಂದು ವೇಳೆ ನಿಯಮವನ್ನ ಮೀರಿ ಬಂದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಆದೇಶವನ್ನ ಹೊರಡಿಸಿರೋದು ಮಾತ್ರವಲ್ಲದೇ ಎಲ್ಲಾ ಮಾಧ್ಯಮಗಳಿಗೂ ಪ್ರಕಟ ಮಾಡುವಂತೆ ಮನವಿ ಮಾಡಿದ್ದಾರೆ.
PublicNext
07/09/2022 05:29 pm