ಬೆಂಗಳೂರು: ರಾಜ್ಯದ ಸಾರಿಗೆ ಇಲಾಖೆ ಈಗೊಂದು ಹೊಸ ಸೂಚನೆ ಹೊರಡಿಸಿದೆ. ಈ ಸೂಚನೆ ಕೊಂಚ ಹೆಚ್ಚೇ ಸ್ಟ್ರಾಂಗ್ ಇದೆ.
ಹೌದು.. ಇನ್ಮುಂದೆ ಸರ್ಕಾರಿ ಇಲಾಖೆ,ನಿಗಮ ಮಂಡಳಿ,ಸಂಘ-ಸಂಸ್ಥೆಗಳ ವ್ಯಾಪ್ತಿಗೆ ಒಳಪಟ್ಟ ಖಾಸಗಿ ವಾಹನಗಳ ಸಂಖ್ಯಾ ಫಲಕಗಳ ಮೇಲೆ ಚಿನ್ಹೆ ಅನಧಿಕೃತ ಹೆಸರು ಇರೋ ಆಗಿಯೇ ಇಲ್ಲ ಅಂತಲೇ ಸಾರಿಗೆ ಇಲಾಖೆ ಹೇಳೀದೆ.
ಈ ಹಿನ್ನೆಲೆಯಲ್ಲಿಯೇ ಸಾರಿಗೆ ಇಲಾಖೆಯು ಎಲ್ಲ ನಿಗಮ,ಸಂಸ್ಥೆಗಳಿಗೆ ಪತ್ರ ಬರೆದಿದೆ. ಮುಂದಿನ 10 ದಿನಗಳಲ್ಲಿ ವಾಹನಗಳ ಮೇಲಿನ ಅನಧಿಕೃತ ಹೆಸರು ಮತ್ತು ಚಿನ್ಹೆ ಇದ್ದರೆ ಅವುಗಳನ್ನ ತೆಗೆದು ಹಾಕಲಬೇಕು.
ಇಲ್ಲದೇ ಇದ್ದರೇ, ನ್ಯಾಯಾಂಗ ನಿಂದನೆ ಆರೋಪದ ಜೊತೆಗೆ ನಿಯಮ ಉಲ್ಲಂಘನೆ ಅಡಿ ಕಠಿಣ ಕ್ರಮಗಳನ್ನ ತೆಗೆದುಕೊಳ್ಳಲಾಗುವುದು ಅಂತಲೂ ಎಚ್ಚರಿಸಿದೆ.
PublicNext
03/06/2022 11:00 am