ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಡಿಎ ಆಯುಕ್ತರ ನೇಮಕದಲ್ಲಿ ತಪ್ಪಾಗಿದೆ-ಹೈಕೋರ್ಟ್

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ನೇಮಕಾತಿಯಲ್ಲಿ ಮೇಲ್ನೋಟಕ್ಕೇನೆ ತಪ್ಪು ಕಾಣುತ್ತಿದೆ. ಇದನ್ನ ಕಂಡ ನ್ಯಾಯಪೀಠ ಕಣ್ಮುಚ್ಚಿ ಕುಳಿತುಕೊಳ್ಳಲು ಆಗೋದೇ ಇಲ್ಲ. ಈ ಕೂಡಲೇ ಸರ್ಕಾರ ಆಕ್ಷೇಪಣೆ ಸಲ್ಲಿಸುವಂತೆ ಹೈಕೋರ್ಟ್ ಈಗ ಸರ್ಕಾರಕ್ಕೆ ಸೂಚನೆ ನೀಡಿದೆ.

ಬಿಡಿಎ ಆಯುಕ್ತ ಎಂ.ಬಿ.ರಾಜೇಶ್ ಗೌಡ ಅವರ ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ಈಗ ಸರ್ಕಾರಕ್ಕೆ ಸೂಚನೆ ನೀಡಿದೆ. ಕೆಎಎಸ್ ಶ್ರೇಣಿಯಿಂದ ಐಎಎಸ್‌ಗೆ ಪದೋನ್ನತಿ ಪಡೆದಿರೋ ರಾಜೇಶ್‌ಗೌಡ ನೇಮಕಾತಿಯಲ್ಲಿ ತಪ್ಪುಗಳಾಗಿವೆ ಅಂತಲೇ ಹೈಕೋರ್ಟ್ ಹೇಳಿದೆ.

ಆದರೆ, ಈ ನೇಮಕಾತಿಗೆ ಆದೇಶವನ್ನ ರದ್ದುಗೊಳಿಸಬೇಕು ಎಂದು ವಕೀಲ ಜಿ.ಮೋಹನ್‌ಕುಮಾರ್‌ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನ್ಯಾಯ ಪೀಠ, ಸರ್ಕಾರಕ್ಕೆ ತ್ವರಿತಗತಿಯಲ್ಲಿಯೇ ಆಕ್ಷೇಪ ಸಲ್ಲಿಸಲು ಸೂಚನೆ ನೀಡಿದೆ.

Edited By :
PublicNext

PublicNext

07/04/2022 12:23 pm

Cinque Terre

51.79 K

Cinque Terre

0

ಸಂಬಂಧಿತ ಸುದ್ದಿ