ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸ ವರ್ಷದ ಹೊಸ್ತಿಲಲ್ಲಿ 8 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಹೊಸ ವರ್ಷದ ಮುನ್ನಾ ದಿನವೇ ರಾಜ್ಯ ಸರ್ಕಾರ, ಡಿ.ರೂಪಾ, ನಿಂಬಾಳ್ಕರ್ ಸೇರಿದಂತೆ 8 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಹೌದು ಡೈರೆಕ್ಟರ್ ಆಪ್ ಸಿವಿಲ್ ರೈಟ್ಸ್ ಎನ್ ಫೋರ್ಸ್ಮೆಂಟ್‌ನ ಎಡಿಜಿಪಿಯಾಗಿದ್ದಂತ ಕೆ.ರಾಮಚಂದ್ರರಾವ್ ಅವರನ್ನು ಗ್ರೇವಿಯನ್ಸ್ ಮತ್ತು ಹ್ಯೂಮನ್ ರೈಟ್ಸ್‍ನ ಎಡಿಜಿಪಿಯಾಗಿ ವರ್ಗಾವಣೆ ಮಾಡಿದೆ. ಗ್ರೇವಿಯೆನ್ಸ್ ಅಂಡ್ ಹ್ಯೂಮನ್ ರೈಟ್ಸ್ ಎಡಿಜಿಪಿಯಾಗಿದ್ದಂತ ಮಾಲಿನಿ ಕೃಷ್ಣಮೂರ್ತಿಯವರನ್ನು ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಡಿ.ರೂಪಾ ಅವರ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಡಿ.ರೂಪಾ ಅವರನ್ನು ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ನೇಮಕ ಮಾಡಿ, ವಿವಾದಿತ ಪೋಸ್ಟಿಂಗ್ ನಿಂದ ಎತ್ತಂಗಡಿ ಮಾಡಿದೆ.

ಇನ್ನೂ ಡಿ.ರೂಪಾ ಜೊತೆ ಜೊತೆಗೆ ಐಜಿಪಿ ಹಾಗೂ ಎಸಿಪಿ ಆಗಿದ್ದಂತ ಹೇಮಂತ್ ನಿಂಬಾಳ್ಕರ್ ಅವರನ್ನು ಐಎಸ್‍ಡಿಯ ಐಜಿಪಿಯಾಗಿ ವರ್ಗಾವಣೆ ಮಾಡಿದೆ. ಎಸಿಬಿಯ ಐಜಿಪಿಯಾಗಿದ್ದಂತ ಚಂದ್ರಶೇಖರ್ ಅವರನ್ನು ಬೆಂಗಳೂರು ಕೇಂದ್ರೀಯ ವಿಭಾಗದ ಐಜಿಪಿಯಾಗಿ ನೇಮಿಸಿ ವರ್ಗಾವಣೆ ಮಾಡಲಾಗಿದೆ.

ಮೈಸೂರು ಸೌತ್ ವಿಭಾದ ಐಜಿಪಿಯಾಗಿದ್ದಂತ ವಿಪುಲ್ ಕುಮಾರ್ ಅವರನ್ನು ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯಾ ಐಜಿಪಿ ಮತ್ತು ಡೈರೆಕ್ಟರ್ ಆಗಿ ನೇಮಕ ಮಾಡಿ ವರ್ಗಾವಣೆ ಮಾಡಲಾಗಿದೆ. ಮಂಗಳೂರಿನ ಡಿಐಜಿ ಹಾಗೂ ಕಮೀಷನರ್ ಆಗಿದ್ದಂತ ವಿಕಾಸ್ ಕುಮಾರ್ ವಿಕಾಸ್ ಅವರನ್ನು, ಕರ್ನಾಟಕ ರಿಸರ್ವ್ ಪೊಲೀಸ್ ನ ಡಿಐಜಿಆಗಿ ನೇಮಕ ಮಾಡಿ ವರ್ಗಾವಣೆ ಮಾಡಲಾಗಿದೆ.

ವರ್ಟಿಕ ಕಟಿಯಾರ್ ಅವರನ್ನು ಬೆಂಗಳೂರಿನ ಕ್ರೈಮ್ ರೆಕಾರ್ಡ್ ಬ್ಯೂರೋದ ಸೂಪರಿಡೆಂಟ್ ಆಫ್ ಪೊಲೀಸ್ಆಗಿ, ರಂಜಿತ್ ಕುಮಾರ್ ಬಂದರು ಅವರನ್ನು ಮಂಗಳೂರು ಸೌತ್ ನ ಎಸಿಪಿ ಸ್ಥಾನದಿಂದ ಬಟ್ಕಳ ಉಪ ವಿಭಾಗದ ಎಸಿಪಿಯಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Edited By : Nagaraj Tulugeri
PublicNext

PublicNext

31/12/2020 09:23 pm

Cinque Terre

108.36 K

Cinque Terre

3

ಸಂಬಂಧಿತ ಸುದ್ದಿ