ಹೊಸದಿಲ್ಲಿ: ಮೋದಿ ನೇತೃತ್ವದ ಕೇಂದ್ರ ಸರಕಾರ ಬಳಕೆದಾರದ ಅಭಿವೃದ್ಧಿ ಶುಲ್ಕ (ಯೂಸರ್ ಡೆವಲಪ್‌ಮೆಂಟ್ ಫೀಸ್-ಯುಡಿಎಫ್) ಜಾರಿಗೆ ತರುವ ನಿರೀಕ್ಷೆ ಇರುವುದರಿಂದ ಇನ್ನು ಮುಂದೆ ರೈಲು ಪ್ರಯಾಣ ದುಬಾರಿಯಾಗಲಿದೆ.
ಮುಂದಿನ ತಿಂಗಳು ನಡೆಯಲಿರುವ ಕೇಂದ್ರ ಸಚಿವ ಸಂಪುಟ 'ಬಳಕೆದಾರರ ಅಭಿವೃದ್ಧಿ ಶುಲ್ಕ' ನೀಡುವ ಸಾಧ್ಯತೆ ಹಿನ್ನೆಲೆಯಲ್ಲಿ ಇನ್ಮುಂದೆ ರೈಲ್ವೆ ಪ್ರಯಾಣದ ಟಿಕೆಟ್ ದರ ಸಾಧ್ಯತೆ ಇದೆ, ಇದರಿಂದಾಗಿ ಸ್ಲೀಪರ್ ಕ್ಲಾಸ್ ಹಾಗೂ ಎಸಿ ರೈಲ್ವೆ ಪ್ರಯಾಣದ ಟಿಕೆಟ್ ದರ 10 ರಿಂದ 35 ರೂಪಾಯಿವರೆಗೆ ಏರಿಕೆಯಾಗುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಈಗಾಗಲೇ ಗ್ಯಾಸ್, ಪೆಟ್ರೋಲ್ ಡಿಸೇಲ್ ದರಗಳು ಏರಿಕೆಯಾಗಿರುವ ಬೆನ್ನಲ್ಲೇ ರೈಲ್ವೆ ಪ್ರಯಾಣದ ಟಿಕೆಟ್ ದರ ದುಬಾರಿಯಾಗುವ ಲಕ್ಷಣಗಳು ಗೋಚರಿಸುತ್ತಿದೆ.
ಇದರಿಂದ ರೈಲು ಪ್ರಯಾಣದ ಸ್ಲೀಪರ್ ಟಿಕೆಟ್ 10 ರೂ., ಎಸಿ ಟಿಕೆಟ್ 35 ರೂ., ಎಸಿ ಫಸ್ಟ್ ಟಯರ್: 35ರಿಂದ 40 ರೂಪಾಯಿ, ಎಸಿ ಟು ಟಯರ್ : 30 ರೂಪಾಯಿ, ಎಸಿ ತ್ರಿ ಟಯರ್ : 30 ರೂಪಾಯಿ ಹಾಗೂ ಸ್ಲೀಪರ್ ಕ್ಲಾಸ್: 10 ರೂಪಾಯಿ ದುಬಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಈ 'ಬಳಕೆದಾರರ ಅಭಿವೃದ್ಧಿ ಶುಲ್ಕ' ರೈಲಿನ ಶ್ರೇಣಿ/ವರ್ಗಕ್ಕೆ ಭಿನ್ನವಾಗಿ ಇರಲಿದೆ. 5 ವಿಭಿನ್ನ ಶ್ರೇಣಿಯಲ್ಲಿ ಇರಲಿದೆ. ಎಸಿ ಪ್ರಯಾಣಿಕರು ಅತ್ಯಧಿಕ ಶುಲ್ಕ ಹಾಗೂ ಸ್ಲೀಪರ್ ಕ್ಲಾಸ್ ಪ್ರಯಾಣಿಕರು ಅತಿ ಕಡಿಮೆ ಶುಲ್ಕ ಪಾವತಿಸಬೇಕಾಗುತ್ತದೆ.
ಈ ಶುಲ್ಕದ ಮೊತ್ತವು ತುಂಬಾ ಸಮಂಜಸವಾದದ್ದು ಹಾಗೂ ಕನಿಷ್ಠವಾದದ್ದು ಎಂದು ನಿರೀಕ್ಷಿಸಲಾಗಿದೆ ಇದರಿಂದ ಯಾರೊಬ್ಬರಲ್ಲೂ ವಿಶೇಷವಾಗಿ ಸಾಮಾನ್ಯ ಜನರ ಮೇಲೆ ಯಾವುದೇ ಹೊರೆ ಬೀಳುವುದಿಲ್ಲ ಎಂದು ರೈಲ್ವೆ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
PublicNext
29/09/2020 08:32 am