ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಪಾಲಿಸ್ಟರ್ ಬಟ್ಟೆಯಲ್ಲಿ ರಾಷ್ಟ್ರಧ್ವಜ; ಹಿರಿಯ ಸ್ವಾತಂತ್ರ್ಯ ಯೋಧ ಕೊಟ್ರಬಸಪ್ಪ ಆಕ್ರೋಶ

ಕೇಂದ್ರ ಮತ್ತು ರಾಜ್ಯ ಸರ್ಕಾರವು ಖಾದಿ ಮೂಲೆಗುಂಪು ಮಾಡಿ ಪಾಲಿಸ್ಟರ್ ಬಟ್ಟೆಯಲ್ಲಿ ಭಾರತದ ಧ್ವಜ ಮಾಡಿಸಿರುವುದನ್ನು ನೋಡಿದರೆ ದೇಶಪ್ರೇಮ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ಖಾದಿ ಗ್ರಾಮೋದ್ಯೋಗ, ಗುಡಿ ಕೈಗಾರಿಕೆಗಳು ಅಭಿವೃದ್ಧಿ ಆಗಬೇಕು. ಅದನ್ನು ಬಿಟ್ಟು ಯಾರಿಗೋ ಗುತ್ತಿಗೆ ನೀಡಿ ಖಾದಿಯಲ್ಲಿ ಧ್ವಜ ರೂಪಿಸದೇ ಇರುವುದು ದೇಶಕ್ಕೆ ಮಾಡಿರುವ ಅಪಮಾನ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಜೆ.‌ ಕೆ. ಕೊಟ್ರಬಸಪ್ಪ ಕಿಡಿಕಾರಿದ್ದಾರೆ.

ಖಾದಿ ಬಟ್ಟೆಯಲ್ಲಿ ಧ್ವಜ ರೂಪಿಸಬೇಕು. ಮೊದಲಿನಿಂದಲೇ ಎಲ್ಲರೂ ಇದನ್ನೇ ಮಾಡಿಕೊಂಡು ಬಂದಿರುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರ ಪಾಲಿಸ್ಟರ್ ಬಟ್ಟೆಯಲ್ಲಿ ತಯಾರಿಸಿರುವ ಧ್ವಜಗಳನ್ನು‌ ಕೂಡಲೇ ಹಿಂಪಡೆಯಬೇಕು. ಯಾರನ್ನೋ ಓಲೈಕೆ ಮಾಡುವುದನ್ನು ಬಿಟ್ಟು ರಾಷ್ಟ್ರಧ್ವಜಕ್ಕೆ ಗೌರವ ನೀಡುವ ಕೆಲಸ ಮಾಡಿ‌ ಎಂದು ಆಗ್ರಹಿಸಿದ್ದಾರೆ.

ಹರ್ ಘರ್ ತಿರಂಗಾ ಅವಶ್ಯಕತೆ ಇಲ್ಲ. ಖಾದಿ ಬಟ್ಟೆಗಳಲ್ಲಿ ರೂಪಿಸಿದ ಬಾವುಟಗಳನ್ನು ಮನೆ ಮೇಲೆ ಹಾರಿಸಬೇಕು. ಈಗ ಮಾಡಿರುವ ಯಡವಟ್ಟು ತಿದ್ದಿಕೊಳ್ಳಬೇಕು. ಈ ಮೂಲಕ ರಾಷ್ಟ್ರಪ್ರೇಮ ತೋರಿಸಿ ಎಂದು ಹೇಳಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಅನೇಕ ಕುಟುಂಬಗಳ ಮನೆಗಳಿವೆ. ಅವರನ್ನು ಗುರುತಿಸುವ ಕೆಲಸ ಮಾಡಿಲ್ಲ. ಯಾರ್ಯಾರಿಗೋ ಸನ್ಮಾನ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೆಲವೇ ಜನರು ಮಾತ್ರ ಸ್ವಾತಂತ್ರ್ಯ ಹೋರಾಟ ಮಾಡಿರುವವರು ಇರೋದು. ಅಂಥವರನ್ನು ಗುರುತಿಸುವ ಕೆಲಸ ಮಾಡಬೇಕಿತ್ತು. ಆದ್ರೆ ಇದು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

13/08/2022 04:59 pm

Cinque Terre

63.36 K

Cinque Terre

3