ಮೇಕೆದಾಟು ಯೋಜನೆ ಜಾರಿ ವಿಚಾರ ಸಂಬಂಧ ಎಲ್ಲದ್ದಕ್ಕೂ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಸುಪ್ರೀಂಕೋರ್ಟ್ ಯಾವುದೇ ತಡೆಯಾಜ್ಞೆ ನೀಡಿಲ್ಲ. ಈಗಾಗಲೇ ಸಿಡಬ್ಲ್ಯೂ ಸಹ ಹೇಳಿದೆ. 15 ಸಭೆಗಳು ನಡೆದಿವೆ. ಸಿಡಬ್ಲ್ಯೂಗೆ ಅಧಿಕಾರ ಇದೆ. ಈ ಪ್ರಕಾರ ಮುಂದಿನ ವಾರ ಸಭೆ ಕರೆಯುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ನಗರದ ಜಿಎಂಐಟಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮೇಕೆದಾಟು ವಿಚಾರ ಸಂಬಂಧ ಈಗಾಗಲೇ ನಮ್ಮ ವಾದವನ್ನು ಮಂಡಿಸಿದ್ದೇವೆ. ಡಿಪಿಆರ್‌ಗೆ ಒಪ್ಪಿಗೆ ಸಿಗಲಿದೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ಮೊದಲನೇ ಹಂತದಲ್ಲಿ ಬಿಬಿಎಂಪಿ ಚುನಾವಣೆ ನಡೆಯಲಿದೆ. ಆ ಬಳಿಕ ಮೀಸಲಾತಿ ಪಟ್ಟಿ ತಯಾರಿಸಿ ವರದಿ ನೀಡಲಾಗುತ್ತದೆ. ನಂತರ ಮೀಸಲಾತಿ ಮಾಡಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ನವರು ಕಾನೂನುಬಾಹಿರ ಭ್ರಟ್ಟಾಚಾರ ಕೇಸ್ ವಿರುದ್ಧ ಹೋರಾಟ ಮಾಡಲು ಹೊರಟಿರುವುದು ದುರಂತ. ಈ ರೀತಿ ಮಾಡಿದರೆ ಕಾಂಗ್ರೆಸ್ ನವರೇ ಮನೆ ಮನೆ ಚಲೋ ನಡೆಸುವಂತೆ ಜನರು ಮಾಡುತ್ತಾರೆ ಎಂದು ಕಾಂಗ್ರೆಸ್ ಚಲೋ ಬಗ್ಗೆ ವ್ಯಂಗ್ಯವಾಡಿದರು.
PublicNext
16/06/2022 01:06 pm