ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಕೇಸರಿ- ಹಿಜಾಬ್ ಸಂಘರ್ಷ: ದಾವಣಗೆರೆಯಲ್ಲಿ ರಾಪಿಡ್ ಆ್ಯಕ್ಷನ್ ಫೋರ್ಸ್‌ನಿಂದ ಭದ್ರತೆ

ದಾವಣಗೆರೆ: ಕಾಲೇಜುಗಳಲ್ಲಿ ಕೇಸರಿ ಶಾಲ್ ಮತ್ತು ಹಿಜಾಬ್ ವಿಚಾರವಾಗಿ ಗಲಾಟೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಶಾಲಾ‌ ಕಾಲೇಜುಗಳ ಬಳಿ ಪೊಲೀಸ್ ಸಿಬ್ಬಂದಿ‌ ಪಹರೆ ಕಾಯುತ್ತಿದ್ದಾರೆ.

ದಾವಣಗೆರೆ ನಗರದಲ್ಲಿ ಹೆಚ್ಚಿನ ಪೊಲೀಸ್ ಹಾಗೂ ರಾಪಿಡ್ ಆಕ್ಷನ್ ಫೋರ್ಸ್ ನಿಯೋಜನೆ ಮಾಡಲಾಗಿದ್ದು, ಗುಂಡಿ ವೃತ್ತದಲ್ಲಿ ಶಸ್ತ್ರಸಜ್ಜಿತರಾಗಿ ರಾಪಿಡ್ ಆಕ್ಷನ್ ಪೋರ್ಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ಮಾಡುತ್ತಿದ್ದಾರೆ‌.

ಫೋರ್ಸ್ ಸಿಬ್ಬಂದಿ ಹಾಗೂ ವಾಹನಗಳ ಸಮೇತ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೇಸರಿ ಹಾಗೂ ಹಿಜಾಬ್ ನಡುವೆ ಗಲಾಟೆ ತೀವ್ರಗೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ.

ಸಂಭನೀಯ ಗಲಾಟೆ ಎದುರಿಸಲು ಸರ್ವ ಸನ್ನದ್ದವಾಗಿರುವ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಆಯ್ದ ಕಾಲೇಜುಗಳು ಮತ್ತು ಹಾಗೂ ಗುಂಡಿ ವೃತ್ತದಲ್ಲಿ ಹೆಚ್ವಿನ ಸೆಕ್ಯೂರಿಟಿ ಮಾಡಲಾಗಿದೆ. ಫೆ. 19ರವರೆಗೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

Edited By : Manjunath H D
PublicNext

PublicNext

16/02/2022 02:01 pm

Cinque Terre

70.24 K

Cinque Terre

1

ಸಂಬಂಧಿತ ಸುದ್ದಿ