ಕರ್ನಾಟಕ ಪರೀಕ್ಷಾ ಪ್ರಾಧಿಕಾರ 1242 ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೆ ಅಭ್ಯರ್ಥಿಗಳಿಗೆ ಶಾಕ್ ಕಾದಿದೆ. ಹೌದು ಈ ಹುದ್ದೆಗಳಿಗೆ ಅಧಿಸೂಚನೆ ವೇಳಾಪಟ್ಟಿ ಪ್ರಕಾರ ಇಂದಿನಿಂದ ಆನ್ ಲೈನ್ ಮೂಲಕ ಅರ್ಜಿಯನ್ನು ಸ್ವೀಕರಿಸಬೇಕಿತ್ತು. ಆದರೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (KAT) ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದರಿಂದ ಹುದ್ದೆಯ ಆಕಾಂಕ್ಷಿಗಳಿಗೆ ಬಿಗ್ ಶಾಕ್ ಉಂಟಾಗಿದೆ.
ಡಾ.ಮೀನಾಕ್ಷಿ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ರಾಜ್ಯದ 16 ಪದವಿ ಕಾಲೇಜುಗಳಲ್ಲಿನ ಒಟ್ಟು 19 ಮನಃಶಾಸ್ತ್ರ ಪ್ರಾಧ್ಯಾಪಕರ ಹುದ್ದೆಗಳನ್ನು ಪ್ರಾಣಿಶಾಸ್ತ್ರ ಹಾಗೂ ಸಸ್ಯಶಾಸ್ತ್ರ ಹುದ್ದೆಗಳಿಗೆ ಪರಿವರ್ತಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಕೆಎಟಿಯಲ್ಲಿ ವಿಚರಣಾ ಹಂತದಲ್ಲಿದೆ. ಹೀಗಿದ್ದು, ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಪ್ರಕ್ರಿಯೆ ನಡೆಸದಂತೆ ಕೆಎಟಿ ಆದೇಶಿಸಿದ್ದರೂ, ರಾಜ್ಯ ಸರ್ಕಾರ ಆಗಸ್ಟ್ 26ರ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿ ಕೆಇಎ'ಗೆ ಮೂಲಕ ನೇಮಕ ಪ್ರಕ್ರಿಯೆ ಮುಂದುವರಿಸಿದೆ. ಆದ್ದರಿಂದ, ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.
ನ್ಯಾಯಾಲಯ ಜುಲೈ.29 ರಂದು ತಡೆಯಾಜ್ಞೆ ನೀಡಿ ನೇಮಕ ಪ್ರಕ್ರಿಯೆ ತಡೆ ಹಿಡಿಯುವಂತೆ ಸೂಚನೆ ನೀಡಿತ್ತು. ಈ ಆದೇಶದ ನಂತರವು ಇಲಾಖೆಯು ಆಗಸ್ಟ್ 1 ರಂದು ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಹೊರಡಿಸಿತ್ತು. ಹಾಗಾಗಿ ಮತ್ತೆ ತಡೆಯಾಜ್ಞೆ ಜಾರಿಗೊಳಿಸಲಾಗಿದೆ.
PublicNext
07/10/2021 01:27 pm