ಶಿಕ್ಷಕರ ನಿರ್ಲಕ್ಷ್ಯ : ವಿದ್ಯಾರ್ಥಿನಿಗೆ 88 ಲಕ್ಷ ಪರಿಹಾರ ಸುಪ್ರೀಂ ಆದೇಶ

ಹೊಸದಿಲ್ಲಿ: ಒಂದೊಮ್ಮೆ ಶಿಕ್ಷಕರು ಸೂಕ್ತ ಸಮಯದಲ್ಲಿ ವಿದ್ಯಾರ್ಥಿನಿಗೆ ಚಿಕಿತ್ಸೆ ಕೊಡಿಸಿದ್ದರೆ ಆಕೆ ಎಲ್ಲರಂತೆ ಬಾಳಿ ಬದುಕುತ್ತಿದ್ದಳು ಆದ್ರೆ ಶಿಕ್ಷಕರ ಆ ಒಂದು ನಿರ್ಲಕ್ಷ್ಯ ವಿದ್ಯಾರ್ಥಿನಿಯ ಬಾಳನ್ನೇ ಕತ್ತಲೆಗೆ ತಳ್ಳಿದೆ. ಶಿಕ್ಷಕರ ಈ ನಿರ್ಲಕ್ಷ್ಯಕ್ಕೆ ಕೋರ್ಟ್ ವಿದ್ಯಾರ್ಥಿನಿಗೆ 88 ಲಕ್ಷ ಪರಿಹಾರ ನೀಡುವಂತೆ ಆದೇಶ ನೀಡಿದೆ.

ಏನಿದು ಪ್ರಕರಣ?:
ಬೆಂಗಳೂರಿನ ಬಿಎನ್ ಎಂ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಅಕ್ಷತಾಳನ್ನು (ಆಗ ಆಕೆಗೆ 14 ವರ್ಷ) 2006ರ ಡಿಸೆಂಬರ್ ನಲ್ಲಿ ಶಾಲೆಯ ವತಿಯಿಂದ ದಿಲ್ಲಿ ಸೇರಿದಂತೆ ಅನೇಕ ಸ್ಥಳಗಳಿಗೆ ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು.

ಆ ಸಂದರ್ಭದಲ್ಲಿ ಅಕ್ಷತಾಗೆ ತೀವ್ರ ವೈರಲ್ ಜ್ವರ ಕಾಣಿಸಿಕೊಂಡಿತು. ಶಿಕ್ಷಕರು ತಕ್ಷಣ ಚಿಕಿತ್ಸೆ ಕೊಡಿಸದೇ ನಿರ್ಲಕ್ಷ್ಯ ತೋರಿದರು.
ಅಕ್ಷತಾ ಸ್ಥಿತಿ ಗಂಭೀರವಾದಾಗ ಪೋಷಕರಿಗೆ ಮಾಹಿತಿ ನೀಡಿದರು. ಪೋಷಕರು ದಿಲ್ಲಿಗೆ ತೆರಳಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ವೈರಲ್ ಜ್ವರವು ಗಂಭೀರ ಸ್ವರೂಪದ 'ಮೆನಿಂಗೊಎನ್ಸಿಫೆಲಾಟಿಸ್' ಎಂಬ ಕಾಯಿಲೆಯಾಗಿ ಪರಿವರ್ತನೆಯಾಗಿತ್ತು. ಜ್ವರ ಬಂದಾಗಲೇ ಆಸ್ಪತ್ರೆಗೆ ದಾಖಲಿಸಿದ್ದರೆ ಗುಣಪಡಿಸಬಹುದಿತ್ತು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದರು.

ದಿಲ್ಲಿಯಲ್ಲಿ 53 ದಿನಗಳವರೆಗೆ ಚಿಕಿತ್ಸೆ ಪಡೆದ ಅಕ್ಷತಾಳನ್ನು ಏರ್ ಲಿಫ್ಟ್ ಮೂಲಕ ಬೆಂಗಳೂರಿಗೆ ಕರೆತರಲಾಯಿತು. ‘ಕಾಯಿಲೆಯಿಂದ ಅಕ್ಷತಾ 21 ತಿಂಗಳ ಮಗುವಿನ ಬುದ್ಧಿಮತ್ತೆಗೆ ತಲುಪಿದ್ದಾರೆ. ಅಲ್ಲದೇ ಆಕೆ ಜೀವನಪೂರ್ತಿ ಹಾಸಿಗೆಯಲ್ಲಿ ಕಳೆಯುವಂತಾಗಿದೆ. ಆಕೆಗೆ ಶೀಘ್ರ ವೈದ್ಯರ ಚಿಕಿತ್ಸೆ ದೊರಕದ ಹಿನ್ನೆಲೆಯಲ್ಲಿ ಗಂಭೀರ ಅನಾರೋಗ್ಯಕ್ಕೆ ತುತ್ತಾಗಬೇಕಾಯಿತು’ ಎಂದು ಆರೋಪಿಸಿ ಪೋಷಕರು ಕರ್ನಾಟಕ ರಾಜ್ಯ ಗ್ರಾಹಕರ ವೇದಿಕೆಗೆ ಅರ್ಜಿ ಸಲ್ಲಿಸಿದ್ದರು.

ವಿದ್ಯಾರ್ಥಿನಿಗೆ ಶಾಲೆಯು 88,73,798 ರೂ. ಪರಿಹಾರದ ಜತೆಗೆ ದೂರು ದಾಖಲಾಗಿದ್ದ ದಿನದಿಂದ ಶೇ.9ರಷ್ಟು ಬಡ್ಡಿ ನೀಡಬೇಕು ಎಂದು ವೇದಿಕೆಯು 2016ರ ಸೆಪ್ಟೆಂಬರ್ ನಲ್ಲಿ ಆದೇಶಿಸಿತ್ತು. ಇದನ್ನು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ(ಎನ್ ಸಿಡಿಆರ್ ಸಿ)ದಲ್ಲಿ ಪ್ರಶ್ನಿಸಲಾಗಿತ್ತು. ಶಿಕ್ಷಕರ ನಿರ್ಲಕ್ಷ್ಯವನ್ನು ತರಾಟೆಗೆ ತೆಗೆದುಕೊಂಡಿದ್ದ ಎನ್ ಸಿಡಿಆರ್ ಸಿಯು ಪರಿಹಾರ ಮೊತ್ತವನ್ನು 88 ಲಕ್ಷದಿಂದ 50 ಲಕ್ಷ ರೂ.ಗೆ ಇಳಿಕೆ ಮಾಡಿತ್ತು. ಹಾಗಾಗಿ ಎನ್ ಸಿಡಿಆರ್ ಸಿ ಆದೇಶದ ವಿರುದ್ಧ ಪಾಲಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

Public News

Public News

2 months ago

Cinque Terre

33.35 K

Cinque Terre

3

 • Sameer Ahamad Mulla
  Sameer Ahamad Mulla

  ನಮ್ಮ ದೇಶದ ಒಳಗೆ ಕಾನೂನು ಉಳಿದಿದೆ ಸುಪ್ರೀಂಕೋರ್ಟಿಗೆ ಒಂದು ಸಲಾಂ 🙏

 • Prabhuraj Patil
  Prabhuraj Patil

  🙏 ನ್ಯಾಯಾಲಯದ ಮೇಲೆ ನಂಬಿಕೆ ಇನ್ನೂ ಹೆಚ್ಚಾಗಿದೆ.

 • laxmi
  laxmi

  ಈ ಆದೇಶ ನಮಗೆ ನ್ಯಾಯಾಲಯ ಮೇಲಿನ ಗೌರವ ಹೆಚ್ಚು ಮಾಡಿತು thank u ಸುಪ್ರೀಂ court