ಪಾವಗಡ: ಪಟ್ಟಣದ ಹೆಲ್ಪ್ ಸೊಸೈಟಿ ಪ್ರಾಯೋಜಕತ್ವದಲ್ಲಿ ಸಾರ್ವಜನಿಕ ಪೊಲೀಸ್ ಪ್ರಕಟಣೆ ಬ್ಯಾನರ್ ಭಾನುವಾರ ಬಿಡುಗಡೆ ಮಾಡಲಾಯಿತು. ಮಟ್ಕಾ, ಇಸ್ಪೀಟ್ ಜೂಜು, ಕಳ್ಳತನ ಮತ್ತಿತರೆ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಒಳಗೊಂಡ ಸಾರ್ವಜನಿಕ ಪಾವಗಡ ಪೊಲೀಸ್ ಪ್ರಕಟಣೆಯುಳ್ಳ ಬ್ಯಾನರ್‌ಗಳನ್ನು ಹೆಲ್ಪ್ ಸೊಸೈಟಿ ಪ್ರಯೋಜಕತ್ವದಲ್ಲಿ ಬಿಡುಗಡೆ ಗೊಳಿಸಲಾಯಿತು.
ಈ ಸಂದರ್ಭದಲ್ಲಿ ಬ್ಯಾನರ್ ಗಳನ್ನು ಬಿಡುಗಡೆ ಗೊಳಿಸಿ ಮಾತನಾಡಿದ ಪಾವಗಡ ಠಾಣೆ ಆರಕ್ಷಕ ವೃತ್ತ ನಿರೀಕ್ಷಕರಾದ ಅಜಯ್ ಸಾರಥಿ ಯವರು ಸಂಘ ಸಂಸ್ಥೆಗಳ ಸಹಕಾರದಲ್ಲಿ ಹೆಲ್ಪ್ ಸೊಸೈಟಿಯ
ಪ್ರಾಯೋಜ ಕತ್ವದಲ್ಲಿ 'ನಮ್ಮ ಪಾವಗಡ ನಮ್ಮ ಹೆಮ್ಮೆ' ಎಂಬ ಅಡಿಯಲ್ಲಿ ಅಪರಾಧ ತಡೆ ಹಾಗೂ ಕಾನೂನು ಬಾಹಿರ ಚಟುವಟಿ ಕೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಉಪಯೋಗ ವಾಗುವಂತ ಸಂಪೂರ್ಣ ಮಾಹಿತಿ ಬ್ಯಾನರ್ ಗಳನ್ನು ಜನಸಂದಣಿ ಪ್ರದೇಶಗಳಲ್ಲಿ ಅಳವಡಿಸ ಲಾಗುತ್ತಿದ್ದು, ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಕಾನೂನು ಬಾಹಿರ ಚಟುವಟಿಕೆ ತಡೆಗಟ್ಟಲು ಮಾಹಿತಿ ನೀಡಲು ಸಹಕಾರವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಾವಗಡ ಪೊಲೀಸ್ ಠಾಣೆ ಆರಕ್ಷಕ ವೃತ್ತ ನೀರಿಕ್ಷಕರಾದ ಅಜಯ್ ಸಾರಥಿ, ಪುರಸಭೆ ಮಾಜಿ ಅಧ್ಯಕ್ಷರಾದ ಮಾನಂ ವೆಂಕಟಸ್ವಾಮಿ , ಪೊಲೀಸ್ ಸಿಬ್ಬಂದಿ ಹಾಗೂ ಹೆಲ್ಪ್ ಸೊಸೈಟಿ ಪದಾಧಿಕಾರಿಗಳು ಹಾಜರಿದ್ದರು.
ವರದಿ ರಾಘವೇಂದ್ರ ದಾಸರಹಳ್ಳಿ ಪಬ್ಲಿಕ್ ನೆಕ್ಸ್ಟ್, ತುಮಕೂರು
PublicNext
28/08/2022 10:25 pm