ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈ ಬಾರಿ ಮೈಸೂರು ದಸರಾದಲ್ಲಿ ದೀಪಾಲಂಕಾರಕ್ಕೆ ಚೀನಿ ಬಲ್ಬ್‌ಗಳ ಬಳಕೆಗೆ ಬ್ಯಾನ್

ಈ ಬಾರಿಯ ದಸರಾದಲ್ಲಿ ಮೈಸೂರು ಅರಮನೆ, ಮೈಸೂರು ನಗರ, ಮತ್ತು ಮೈಸೂರಿನ ಅನೇಕ ಸಕ್ರಲ್‌ಗಳು ಪ್ರತಿ ಬಾರಿ ದೀಪಾಲಂಕಾರದಲ್ಲಿ ಕಂಗೊಳಿಸುತ್ತದೆ. ಇದೀಗ ಮೈಸೂರು ದಸರಾದಲ್ಲಿ ದೀಪಾಲಂಕಾರಕ್ಕೆ ಚೀನಿ ಬಲ್ಬ್‌ಗಳನ್ನು ಬಳಸದೆ ಇರಲು ನಿರ್ಧರಿಸಿದ್ದು, ಆಮೂಲಕ ಆತ್ಮ ನಿರ್ಭರ ಭಾರತಕ್ಕೆ ಚಾಲನೆ ನೀಡಲಾಗುತ್ತಿದೆ.

ಈಗಾಗಲೇ ತಯಾರಿಗಳನ್ನು ಜಿಲ್ಲಾಡಳಿತ ಮಾಡುತ್ತಿದ್ದು, ಮೈಸೂರು ದಸರಾ ಹಬ್ಬದ ಅಂಗವಾಗಿ ಸುಮಾರು 60 ರಿಂದ 70 ಕಿ.ಮೀವರೆಗೂ ದೀಪಾಲಂಕಾರ ಮಾಡಲಾಗುತ್ತದೆ. ಅರಮನೆ ಸೇರಿದಂತೆ ಅನೇಕ ಕಡೆ ಬಲ್ಬುಗಳ ಪರಿಶೀಲನೆಯನ್ನು ಸಹ ಮಾಡುತ್ತಿದ್ದಾರೆ. ಚೀನಾದ ಬಲ್ಬ್ ಗಳನ್ನು ಬಳಸದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.

ಬಲ್ಬ್ ಗಳನ್ನು ತರಿಸಲಾಗಿರುತ್ತದೆ. ಚೀನಾದ ಯಾವುದೇ ವಸ್ತುಗಳನ್ನು ದಸರಾ ದೀಪಾಲಂಕಾರದಲ್ಲಿ ಬಳಸದಿರಲು ನಿರ್ಧರಿಸಲಾಗಿದೆ ಎಂದು ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯಂ ತಿಳಿಸಿದ್ದಾರೆ.

ಚೀನಾದ ಯಾವುದೇ ವಸ್ತುಗಳನ್ನು ದಸರಾ ದೀಪಾಲಂಕಾರದಲ್ಲಿ ಬಳಸದಿರಲು ನಿರ್ಧರಿಸಿದ್ದು, ಸ್ಥಳೀಯ ಉತ್ಪನ್ನಗಳಿಗೆ ಒತ್ತು ನೀಡಲು ಮುಂದಾಗಿದ್ದು, ಮುಂಬೈ, ದೆಹಲಿ, ಕೊಲ್ಕತ್ತಾಗಳಿಂದ ಬಲ್ಬ್ ಗಳನ್ನು ತರಿಸಲಾಗಿರುತ್ತದೆ, ಎಂದು ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ.ಎಸ್‌.ಸುಬ್ರಮಣ್ಯ ತಿಳಿಸಿದ್ದಾರೆ.

ಇನ್ನು ಕೇವಲ ದೀಪಾಲಂಕರದ ಬಲ್ಬ್‌ ಮಾತ್ರವಲ್ಲದೇ ಇನ್ನುಳಿದ ಚೀನೀ ಉತ್ಪನ್ನಗಳನ್ನು ಬ್ಯಾನ್‌ ಮಾಡಬೇಕು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದು, ಈ ನಿರ್ಧಾರ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Edited By :
PublicNext

PublicNext

26/09/2020 07:09 pm

Cinque Terre

81.58 K

Cinque Terre

1

ಸಂಬಂಧಿತ ಸುದ್ದಿ