ನವದೆಹಲಿ: ಸಂಚಾರಿ ನಿಯಮಗಳ ಉಲ್ಲಂಘನೆ ತಡೆಯಲು ಪೊಲೀಸರು ಎಷ್ಟೇ ಕ್ರಮ ಕೈಗೊಂಡರೂ ಕೆಲವರು ನಿಯಮ ಉಲ್ಲಂಘನೆ ಮಾಡುತ್ತಾರೆ. ಈ ಹಿನ್ನಲೆಯಲ್ಲಿ ದೆಹಲಿ ಪೊಲೀಸರು ಸಿಗ್ನಲ್ ಜಂಪ್ ವಿಚಾರದಲ್ಲಿ ವಾಹನ ಸವಾರರನ್ನು ಜಾಗೃತಿ ಮೂಡಿಸುವ ವಿಶೇಷ ಮೀಮ್ ಒಂದನ್ನು ಹಂಚಿಕೊಂಡಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಮೀಮ್ ವಿಡಿಯೋ ವೈರಲ್ ಆಗುತ್ತಿದೆ. ಮೀಮ್ ಮೂಲಕ ದೆಹಲಿ ಪೊಲೀಸರು ಸಂಚಾರ ನಿಯಮಗಳನ್ನು ಅನುಸರಿಸಲು ಮತ್ತು ರಸ್ತೆ ಸುರಕ್ಷತೆಯನ್ನು ಅಭ್ಯಾಸ ಮಾಡಲು ಜನಸಾಮಾನ್ಯರನ್ನು ಒತ್ತಾಯಿಸಿದ್ದಾರೆ. ವೇಗದ ಕಾರಿನೊಂದಿಗೆ ಪ್ರಾರಂಭವಾಗುವ ಮೀಮ್ ವಿಡಿಯೋದಲ್ಲಿ ಕಭಿ ಖುಷಿ ಕಭಿ ಗಮ್ ಚಿತ್ರದಲ್ಲಿ ಕರೀನಾ ಕಪೂರ್ ಅವರ ಪೂ ಎಂಬ ಸಾಂಪ್ರದಾಯಿಕ ಪಾತ್ರದ ಕ್ಲಿಪ್ ಅನ್ನು ಸಿಗ್ನಲ್ ಲೈಟ್ ಕೆಂಪು ದೀಪಕ್ಕೆ ಎಡಿಟ್ ಮಾಡಲಾಗಿದೆ. "ಕೌನ್ ಹೈ ಯೇ, ಜಿಸ್ನೆ ದೋಬಾರಾ ಮುಝೆ ನಹೀ ದೇಖಾ (ಅವನು ಯಾರು, ನನ್ನತ್ತ ತಿರುಗಿ ನೋಡದವನು ಯಾರು?)" ಎಂಬ ಪ್ರಸಿದ್ಧ ಡೈಲಾಗ್ ಅನ್ನು ಕರೀನಾ ಹೇಳುವುದನ್ನು ಕೇಳಿಸಬಹುದು.
PublicNext
17/07/2022 05:32 pm