ಮುಂಬೈ: ಕಾರ್ಡೆಲಿಯಾ ಕ್ರೂಸ್ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಎನ್ಸಿಬಿಯಿಂದ ಕ್ಲೀನ್ಚಿಟ್ ಪಡೆದಿರುವ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ಗೆ ಅವರ ಪಾಸ್ಪೋರ್ಟ್ ಹಿಂತಿರುಗಿಸಲು ಮುಂಬೈನ ವಿಶೇಷ ನ್ಯಾಯಾಲಯ ಒಪ್ಪಿದೆ.
ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಭಾಗಿಯಾಗಿದ್ದ ಆರೋಪದ ಮೇಲೆ ವಿಚಾರಣೆಯ ಹಂತದಲ್ಲಿ ವಿದೇಶಕ್ಕೆ ತೆರಳದಂತೆ ಕೋರ್ಟ್ ಸೂಚಿಸಿತ್ತು. ಅಲ್ಲದೇ ಪಾಸ್ಪೋರ್ಟ್ ಕೋರ್ಟ್ ವಶಕ್ಕೆ ನೀಡಲು ಆದೇಶಿಸಿತ್ತು. ಅದರಂತೆ ಆರ್ಯನ್ ಖಾನ್ ಪಾಸ್ಪೋರ್ಟ್ ಅನ್ನು ಕೋರ್ಟ್ಗೆ ನೀಡಿದ್ದರು.
ಇದೀಗ ಪ್ರಕರಣದಿಂದ ಖುಲಾಸೆ ಪಡೆದಿದ್ದು, ತನ್ನ ಪಾಸ್ಪೋರ್ಟ್ ವಾಪಸ್ ನೀಡಬೇಕು ಎಂದು ಕೋರಿ ಮುಂಬೈ ಸೆಷನ್ಸ್ ನ್ಯಾಯಾಲಯದ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯಕ್ಕೆ ಆರ್ಯನ್ ಅರ್ಜಿ ಸಲ್ಲಿಸಿದ್ದರು.
PublicNext
13/07/2022 10:27 pm