ಮೈಸೂರು: ನಟಿ ಪವಿತ್ರ ಲೋಕೇಶ್, ತೆಲುಗು ನಟ ನರೇಶ್ ಹಾಗೂ ಅವರ ಪತ್ನಿ ರಮ್ಯಾ ರಘುಪತಿ ನಡುವಿನ ವಿವಾದ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ.
ಇದೀಗ ಮೈಸೂರಿನ ಖಾಸಗಿ ಹೋಟೆಲ್ನ ಒಂದೇ ರೂಮ್ನಲ್ಲಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಇರುವ ಬಗ್ಗೆ ರಮ್ಯಾ ರಘುಪತಿ ಅವರಿಗೆ ಮಾಹಿತಿ ಸಿಕ್ಕಿತ್ತು. ಇಲ್ಲಿಗೆ ಬಂದ ರಮ್ಯಾ ಹೋಟೆಲ್ನ ನರೇಶ್ ಇದ್ದ ಕೋಣೆ ಮುಂದೆ ಪಟ್ಟು ಹಿಡಿದು ಕುಳಿತಿದ್ದರು. ಇನ್ನು ಪತಿ ನರೇಶ್, ಪವಿತ್ರಾ ಹೊರ ಬರುತ್ತಿದ್ದಂತೆಯೇ ಚಪ್ಪಲಿಯಲ್ಲಿ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಕೂಡಲೇ ಪೊಲೀಸರು ರಮ್ಯಾ ರಘುಪತಿಯನ್ನು ತಡೆದಿದ್ದಾರೆ.
ನಂತರ ಪವಿತ್ರಾ ಲೋಕೇಶ್ ಹಾಗೂ ನರೇಶ್ಗೆ ಅವಾಚ್ಯ ಶಬ್ದಗಳಿಂದ ರಮ್ಯಾ ರಘುಪತಿ ನಿಂದಿಸಿದ್ದಾರೆ. ಈ ವೇಳೆ ನರೇಶ್ ಅವರು ನೀನೊಬ್ಬಳು ವಂಚಕಿ, ಮೋಸಗಾತಿ ಎಂದು ಜೋರಾಗಿ ಕಿರುಚಾಡುತ್ತಾ, ವಿಜಲ್ ಹೊಡೆಯುತ್ತಾ ಲಿಫ್ಟ್ ಮೂಲಕ ತೆರಳಿದರು.
PublicNext
03/07/2022 02:45 pm