ಬೆಂಗಳೂರು: ನಟ ದೂದ್ ಪೇಡಾ ದಿಗಂತ್ ಗೋವಾದ ಸಮುದ್ರ ದಡದಲ್ಲಿ ಸಮ್ಮರ್ ಸಾಲ್ಟ್ ಜಂಪ್ ಮಾಡುವ ವೇಳೆ ಆಯತಪ್ಪಿ ಬಿದ್ದು ಕುತ್ತಿಗೆಗೆ ಪೆಟ್ಟು ಬಿದ್ದಿತ್ತು.
ಇನ್ನು ನಟನ ಬೆನ್ನು ಮೂಳೆಗೆ ಬಲವಾದ ಪೆಟ್ಟು ಬಿದ್ದಿತ್ತು. ಸದ್ಯ ನಟ ದಿಗಂತ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ನಿನ್ನೆ ರಾತ್ರಿ ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಯಶಸವಿಯಾಗಿದ್ದು ದಿಗಂತ್ ರನ್ನು ಆಸ್ಪತ್ರೆಯ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ದಿಂಗತ್-ಐಂದ್ರಿತಾ ದಂಪತಿ ವೀಕೆಂಡ್ ಟ್ರಿಪ್ ಗೆ ಗೋವಾಗೆ ತೆರಳಿದ್ರು. ಆದ್ರೆ, ಈ ವೇಳೆ ದಿಗಂತ್ ಅಪಾಯಕ್ಕೆ ಸಿಲುಕಿದ್ದಾರೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಟ ದಿಗಂತ್ಗೆ ಚಿಕಿತ್ಸೆ ಪಡೆದುಕೊಂಡಿದ್ದಾರೆ.ನಟ ದಿಗಂತ್ ಬೆನ್ನು ಮೂಳೆ ಮತ್ತು ಸ್ಪೈನಲ್ ಕಾರ್ಡ್ಗೆ ಗಂಭೀರ ಪೆಟ್ಟು ಬಿದ್ದಿದೆ. ಸದ್ಯ ದಿಂಗತ್ ಆರೋಗ್ಯದ ಬಗ್ಗೆ ಮಣಿಪಾಲ್ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಸ್ಪೋರ್ಟ್ಸ್ ಇಂಜುರಿಯಿಂದ ಬಳಲುತ್ತಿರುವ ನಟನಿಗೆ ಚಿಕಿತ್ಸೆ ಮುಂದುವರೆದಿದೆ. ಸದ್ಯ ದಿಂಗತ್ ಔಟ್ ಆಪ್ ಡೇಂಜರ್ ಎಂದು ಮಾಹಿತಿ ನೀಡಿದ್ದಾರೆ.
ಇನ್ನೂ ಈಗಾಗಲೇ ದಿಗಂತ್ಗೆ ಅಪರೇಷನ್ ಮಾಡಿ ಮುಗಿಸಿರೋ ವೈದ್ಯರು, ಸದ್ಯ ಅಬ್ಸರ್ವೇಷನ್ನಲ್ಲಿ ಇಟ್ಟಿದ್ದಾರೆ. ಸದ್ಯ ನಟ ದಿಗಂತ ಔಟ್ ಆಫ್ ಡೇಂಜರ್ ಇದ್ದು, ಇಂದು ಬೆಳಗ್ಗೆ 10 ಬಳಿಕ ಎರಡನೇ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಲಾಗುತ್ತೆ ಎಂದು ಮಣಿಪಾಲ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
PublicNext
22/06/2022 08:58 am