ಬೆಂಗಳೂರು: ನಟ ಅರ್ಜುನ್ ಸರ್ಜಾ ಮೇಲಿದ್ದ ಮೀ ಟೂ ಆರೋಪದಿಂದ ಮುಕ್ತರಾಗಿದ್ದಾರೆ. ಸರ್ಜಾ ಮೇಲಿದ್ದ ಮೀಟೂ ಆರೋಪಕ್ಕೆ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಕೋರ್ಟ್ ಗೆ ಕಬ್ಬನ್ ಪಾರ್ಕ್ ಪೊಲೀಸ್ರು 'ಬಿ' ರಿಪೋರ್ಟ್ ಸಲ್ಲಿಸಿದ್ರು.
ಒಂದು ತಿಂಗಳ ಹಿಂದೆ ನಗರದ 8ನೇ ಎಸಿಎಂಎಂ ಕೋರ್ಟ್ 'ಬಿ' ರಿಪೋರ್ಟ್ ಸಲ್ಲಿಸಲಾಗಿತ್ತು. 'ಬಿ' ರಿಪೋರ್ಟ್ ಪ್ರಶ್ನಿಸಿ ನಟಿ ಶೃತಿ ಹರಿಹರನ್ ಗೆ ಪ್ರಶ್ನಿಸುವ ಕಾಲಾವಕಾಶ ಇತ್ತು.
ಆದ್ರೆ, ಶೃತಿ ಹರಿಹರನ್ 'ಬಿ' ರಿಪೋರ್ಟ್ ಪ್ರಶ್ನಿಸದ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ರು ಸಲ್ಲಿಸಿದ 'ಬಿ' ರಿಪೋರ್ಟ್ ನ್ಯಾಯಾಲಯದಲ್ಲಿ ಅಂಗೀಕಾರವಾಗಿದೆ. ಇದ್ರಿಂದ ನಟ ಅರ್ಜುನ್ ಸರ್ಜಾಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
PublicNext
13/01/2022 04:31 pm