ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನ ನಂತರ ಅವರ ಸಂಸ್ಥೆಯ ಸಹಾಯಾರ್ಥ ಇಂದು ನಡೆಯಬೇಕಿದ್ದ ಶೋವೊಂದನ್ನು ಬೆಂಗಳೂರು ಪೊಲೀಸರು ತಡೆದಿರುವ ಕಾರಣ ಇಂದಿನ ಕಾರ್ಯಕ್ರಮ ರದ್ದಾಗಿದೆ.
ಕಾಮಿಡಿಯನ್ ಮುನಾವರ್ ಫಾರೂಕಿ ಎಂಬವರಿಂದ ನಡೆಯಬೇಕಿದ್ದ ಈ ಹಾಸ್ಯಭರಿತ ಮನರಂಜನಾ ಕಾರ್ಯಕ್ರಮ ಇಂದು ಬೆಂಗಳೂರಿನ ಗುಡ್ ಷೆಪರ್ಡ್ ಆಡಿಟೋರಿಯಮ್ ನಲ್ಲಿ ನಡೆಯಬೇಕಿತ್ತು.ಆದರೆ ಮುನಾವರ್ ಈ ಕಾರ್ಯಕ್ರಮ ಭಾಗವಹಿಸುತ್ತಿರುವುದರಿಂದ ವಿಧ್ವಂಸಕ ಕೃತ್ಯ ನಡೆಯುವ ಸಾಧ್ಯತೆ ಇರುವುದರಿಂದ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಕಾರ್ಯಕ್ರಮಕ್ಕೆ ತಡೆ ಹಾಕಲಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. ಕಾರ್ಯಕ್ರಮ ರದ್ದಾಗಿರುವ ಬಗ್ಗೆ ಟ್ವೀಟ್ ಮಾಡಿರುವ ಮುನಾವರ್ ಫಾರೂಕಿ ಬೇಸರ ವ್ಯಕ್ತಪಡಿಸಿದ್ದಾರೆ.
PublicNext
29/11/2021 11:49 am