ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ರಾಮಯ್ಯ ಆಸ್ಪತ್ರೆಗೆ ಕರೆದೊಯ್ದಿದ್ದರೆ ಅಪ್ಪು​ ಸಾಯುತ್ತಿರಲಿಲ್ಲ': ಡಾ.ರಮಣರಾವ್ ವಿರುದ್ಧ ಮತ್ತೊಂದು ದೂರು

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹಠಾತ್ ನಿಧನದ ಹಿನ್ನೆಲೆಯಲ್ಲಿ ಡಾ.ರಮಣ ರಾವ್ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಕನ್ನಡಪರ ಚಿಂತಕ ಡಾ.ಆರ್.ಎ. ಪ್ರಸಾದ್ ಅವರು ಸದಾಶಿವನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು ಪುನೀತ್ ಅವರ ನಿವಾಸದ ಹತ್ತಿರದಲ್ಲಿರುವ ಎಂ.ಎಸ್ ರಾಮಯ್ಯಗೆ ಕಳಿಸದೇ ವಿಕ್ರಮ್ ಆಸ್ಪತ್ರೆಗೆ ದಾಖಲು ಮಾಡಿದ್ಯಾಕೆ ಎಂದು ಪ್ರಶ್ನಿಸಿದ್ದಾರೆ.

ಹೃದಯಾಘಾತ ಸೂಚನೆ ಕಂಡರೂ ಎಂ.ಎಸ್ ರಾಮಯ್ಯ ಹೃದಯ ಘಟಕಕ್ಕೆ ದಾಖಲು ಮಾಡಿಲ್ಲ. ಹೀಗಾಗಿ ವೈದ್ಯರು ನಿರ್ಲಕ್ಷ್ಯ ಮಾಡುವುದರ ಮೂಲಕ ವೃತ್ತಿಗೆ ಕರ್ತವ್ಯಲೋಪ ಎಸಗಿರೋದಾಗಿ ದೂರಿನಲ್ಲಿ ಆಪಾದಿಸಲಾಗಿದೆ. ಸ್ಲೋ ಪಾಯಿಜನ್ ಆಗಿರುವ ಸಾಧ್ಯತೆಯ ಬಗ್ಗೆಯೂ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ನಿಗೂಢ ಸಾವಿಗೆ ಕಾರಣವೇನೆಂದು ತಿಳಿಯಲು ಕಾನೂನಾತ್ಮಕ ತನಿಖೆ ನಡೆಸಬೇಕು ಎಂದು ಡಾ.ಆರ್.ಎ. ಪ್ರಸಾದ್ ಒತ್ತಾಯಿಸಿದ್ದಾರೆ.

ಡಾ. ರಮಣ ರಾವ್ ವಿರುದ್ಧ ಈಗಾಗಲೇ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಒಂದು ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅವರ ನಿವಾಸಕ್ಕೆ, ಹಾಗೂ ಕ್ಲಿನಿಕ್ ಗೆ ಬಿಗಿ ಭದ್ರತೆ ಒದಗಿಸಲಾಗಿದೆ.

Edited By : Vijay Kumar
PublicNext

PublicNext

08/11/2021 11:00 pm

Cinque Terre

55.34 K

Cinque Terre

10

ಸಂಬಂಧಿತ ಸುದ್ದಿ