ಮುಂಬೈ: ಡ್ರಗ್ ಕೇಸ್ನಲ್ಲಿ ಸಿಕ್ಕಿರುವ ಆರ್ಯನ್ ಖಾನ್ ಅವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಆದರೆ ಇಂದು ನಡೆಯ ಬೇಕಿದ್ದ ಎನ್‍ಸಿಬಿ ವಿಚಾರಣೆಯಿಂದ ಆರ್ಯನ್ ಖಾನ್ ತಪ್ಪಿಸಿಕೊಂಡಿದ್ದಾರೆ.
ಕರೆದಾಗ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿ ಕೋರ್ಟ್ ಆರ್ಯನ್‌ಗೆ ಜಾಮೀನು ನೀಡಿತ್ತು. ಆದರೆ ಆರ್ಯನ್ ಖಾನ್ ಇಂದು (ನವೆಂಬರ್ 7) ವಿಚಾರಣೆಗೆ ಹಾಜರಾಗಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಆರ್ಯನ್ ಖಾನ್ ತಿಳಿಸಿದ್ದಾರೆ.
ಡಿಡಿಜಿ ಎನ್‍ಸಿಬಿ ಸಂಜಯ್ ಸಿಂಗ್ ಅವರು ಆರ್ಯನ್ ಖಾನ್‌ಗೆ ಬುಲಾವ್ ನೀಡಿದ್ದರು. ಆದರೆ ಆರ್ಯನ್, ತಮಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿದೆ. ಹೀಗಾಗಿ ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಕೊರೊನಾ ಲಕ್ಷಣ ಕಾಣಿಸಿಕೊಂಡಿದ್ದರಿಂದ ಅದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಹೀಗಾಗಿ ವಿಚಾರಣೆಗೆ ಬೇರೊಂದು ದಿನಾಂಕ ನೀಡುವಂತೆ ಅವರು ಕೋರಿದ್ದಾರೆ. ಇದಕ್ಕೆ ಎನ್‍ಸಿಬಿ ಅಧಿಕಾರಿಗಳು ಸಮ್ಮತಿ ನೀಡಿದ್ದಾರೆ. ಪರಿಸ್ಥಿತಿ ನೋಡಿಕೊಂಡು ಮುಂದಿನ ವಿಚಾರಣೆ ದಿನಾಂಕ ನಿಗದಿ ಮಾಡಲು ನಿರ್ಧರಿಸಲಾಗಿದೆ.
PublicNext
07/11/2021 10:52 pm