ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಕೇಸ್‌ನಲ್ಲಿ ಬಂಧಿಯಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದೆ.
ಆರ್ಯನ್ ಖಾನ್ ಕೇಸ್ ಸಂಬಂಧ ಇಂದು ಮುಂಬೈನ ವಿಶೇಷ ಎನ್ಡಿಪಿಎಸ್ ಕೋರ್ಟ್ ಮಹತ್ವದ ತೀರ್ಪು ನೀಡಲಿದ್ದು, ಖಾನ್ ಪುತ್ರನಿಗೆ ಜೈಲಾ ಅಥವಾ ಬೇಲಾ ಎಂಬುದು ಗೊತ್ತಾಗಲಿದೆ. ಕಳೆದ 14ರಂದು ಜಾಮೀನು ಅರ್ಜಿಯ ವಾದ-ಪ್ರತಿವಾದ ಆಲಿಸಿರುವ ಕೋರ್ಟ್, ಇವತ್ತು ತೀರ್ಪು ಕಾಯ್ದಿರಿಸಿದೆ.
ಆರ್ಯನ್ ಖಾನ್ ಕ್ರೂಸ್ ಶಿಪ್ನಲ್ಲಿ ನಡೆದ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಮಾಡಿದ್ದರು ಎಂದು ಎನ್ಸಿಬಿ ಹೇಳಿದೆ. ಎನ್ಡಿಪಿಎಸ್ ಆ್ಯಕ್ಟ್, 1985 ಅಡಿ ಭಾರತದಲ್ಲಿ ಡ್ರಗ್ಸ್ ಸೇವನೆ ಅಪರಾಧ. ಇನ್ನು ಎನ್ಸಿಬಿ ಡ್ರಗ್ಸ್ ಮಾರಾಟದ ಆರೋಪವನ್ನೂ ಹೊರಿಸಿದೆ. ಕೊಕೇನ್, ಮಾರ್ಫಿನ್, ಹೆರಾಯಿನ್ ಡ್ರಗ್ನ್ನು ಸೇವನೆ ಮಾಡಿದ್ದಲ್ಲಿ ಒಂದು ವರ್ಷ ಕಠಿಣ ಶಿಕ್ಷೆಗೆ ಒಳಪಡಿಸಬಹುದು. 20 ಸಾವಿರವರೆಗೆ ದಂಡ ವಿಧಿಸಬಹುದು. ಚರಸ್ ಸೇರಿದಂತೆ ಇನ್ನಿತರೆ ಡ್ರಗ್ ಸೇವಿಸಿದ್ದಲ್ಲಿ 6 ತಿಂಗಳು ಜೈಲಿಗೆ ಕಳಿಸಬಹುದು ಅಥವಾ 10 ಸಾವಿರ ದಂಡ ವಿಧಿಸಬಹುದು. ಇಲ್ಲವೇ ಎರಡೂ ಶಿಕ್ಷೆ ನೀಡಬಹುದು.
PublicNext
20/10/2021 07:51 am