ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಶಾಂತ್ ಸಿಂಗ್ ಹತ್ಯೆಯಾಗಿಲ್ಲ: ಸತ್ಯ ಬಹಿರಂಗಪಡಿಸಿದ ಏಮ್ಸ್ ವರದಿ

ಹೊಸದಿಲ್ಲಿ: ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಯಾರೂ ಹತ್ಯೆ ಮಾಡಿಲ್ಲ, ಅವರದ್ದು ಆತ್ಮಹತ್ಯೆ ಎಂದು ಸ್ಪಷ್ಟವಾಗಿ ದಿಲ್ಲಿ ಏಮ್ಸ್ ವೈದ್ಯರ ತಂಡ ಸಿಬಿಐಗೆ ನೀಡಿದ ವರದಿಯಲ್ಲಿ ತಿಳಿಸಿದೆ ಎಂದು ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ.

ವಿಷ ಕೊಟ್ಟು, ಕತ್ತು ಹಿಸುಕಿ ಸಾಯಿಸಲಾಗಿದೆ ಅದೊಂದು ವ್ಯವಸ್ಥಿತ ಕೊಲೆ ಎಂದು ನಟ ಸುಶಾಂತ್ ಕುಟುಂಬದವರು ಹಾಗೂ ವಕೀಲರು ಹೇಳಿದ್ದರು. ಆದರೆ ಇದೀಗ ಎಲ್ಲ ಅನುಮಾನಗಳಿಗೆ ಬ್ರೇಕ್ ಹಾಕಿದ್ದು, ಸುಶಾಂತ್​​ರನ್ನು ಯಾರೂ ಹತ್ಯೆ ಮಾಡಿಲ್ಲ. ಅವರದ್ದು ಆತ್ಮಹತ್ಯೆ ಎಂದು ಏಮ್ಸ್​ ವೈದ್ಯ ಡಾ.ಸುಧೀರ್​ ಗುಪ್ತಾ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಸುಶಾಂತ್​ ಸಿಂಗ್​ ಅವರ ಒಳ ಅಂಗಗಳ ಪೋಸ್ಟ್​ ಮಾರ್ಟಮ್​​ ರಿಪೋರ್ಟ್​ನಿಂದ ಅವರದ್ದು ಕೊಲೆ ಅಲ್ಲ, ಆತ್ಮಹತ್ಯೆ ಎಂಬುದು ಸಾಬೀತಾಗಿದೆ, ಎಂದು ಮಾಹಿತಿ ನೀಡಿದ್ದಾರೆ.

ಸುಶಾಂತ್ ಸಿಂಗ್ (34) ಜೂ.14ರಂದು ಮುಂಬೈನಲ್ಲಿರುವ ಅಪಾರ್ಟ್ ಮೆಂಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು, ಮುಂಬೈ ಪೊಲೀಸರು, ಶವಪರೀಕ್ಷೆಯ ಆಧಾರದ ಮೇಲೆ ಅವರದ್ದು ಆತ್ಮಹತ್ಯೆ ಎಂದು ತಿಳಿಸಿದ್ದರು, ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಊಹಾಪೋಹಗಳು ಹಬ್ಬಿದ್ದವು, ನ್ಯಾಯ ಸಿಗಬೇಕೆಂದು ಒತ್ತಾಯಿಸಲಾಗಿತ್ತು.

ಬಿಹಾರದಲ್ಲಿ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಿಸಿದ್ದರು. ಈ ಎಲ್ಲಾ ಒತ್ತಡದ ನಡುವೆ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿತ್ತು.ಆದರೆ ಇದೀಗ ಏಮ್ಸ್ ತಂಡ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದು, ಈ ಪ್ರಕರಣದ ಬಗ್ಗೆ ಸಿಬಿಐಗೆ ಮೆಡಿಕೋ ಲೀಗಲ್ ಅಭಿಪ್ರಾಯವನ್ನು ತಿಳಿಸಿದ ಬಳಿಕ ಫೈಲ್ ಅನ್ನು ಮುಕ್ತಾಯಗೊಳಿಸಿರುವುದಾಗಿ ತಿಳಿದು ಬಂದಿದೆ.

ಸಿಬಿಐ ತಮ್ಮ ತನಿಖೆಯೊಂದಿಗೆ ವರದಿಯನ್ನು ದೃಢೀಕರಿಸುತ್ತಿದೆ, ಬಿಹಾರ ಪೊಲೀಸರು ಪಟ್ಟಿ ಮಾಡಿರುವ ಅನುಮಾನಗಳ ಬಗ್ಗೆ ತನಿಖೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

Edited By :
PublicNext

PublicNext

03/10/2020 01:45 pm

Cinque Terre

93.19 K

Cinque Terre

2