ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾರುಕಟ್ಟೆ ಬಂದ್: ರೈತರಿಂದ ತರಕಾರಿ ರಸ್ತೆಗೆ ಚೆಲ್ಲಿ ಆಕ್ರೋಶ

ವಿಜಯಪುರ: ವೀಕೆಂಡ್ ಕರ್ಫ್ಯೂನಿಂದಾಗಿ ತರಕಾರಿ ಮಾರಾಟಕ್ಕೆ ಪೊಲೀಸರು ಅಡ್ಡಿಪಡಿಸಿದ್ದರಿಂದ ರೊಚ್ಚಿಗೆದ್ದ ರೈತನೋರ್ವ ರಸ್ತೆ‌ ಮೇಲೆ ಸೊಪ್ಪು ತರಕಾರಿಗಳನ್ನು ಚೆಲ್ಲಿ ಪ್ರತಿಭಟನೆ ನಡೆಸಿ ಘಟನೆ ವಿಜಯಪುರದಲ್ಲಿ ನಡೆದಿದೆ.

ರೈತ ಭೀಮನಗೌಡ ಬಿರಾದಾರ ಎಂಬುವರು ರಸ್ತೆಯ ಮೇಲೆ ಸೊಪ್ಪು ತರಕಾರಿ ಎಸೆದು ಪೊಲೀಸರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ವಿಜಯಪುರ ನಗರದ ಗೋದಾವರಿ ಹೋಟೆಲ್ ಮುಂಭಾಗದಲ್ಲಿ ಈ ಘಟನೆ ನಡೆದಿದೆ.

ಸುರಕ್ಷಿತ ಅಂತರ ಕಾಯ್ದುಕೊಂಡು ತರಕಾರಿ ಮಾರಾಟ ಮಾಡುತ್ತಿದ್ದರೂ ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ರೈತ ಭೀಮನಗೌಡ ಬಿರಾದಾರ ದೂರಿದ್ದಾರೆ. ಅಷ್ಟೇ ಅಲ್ಲದೆ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ ನೂರಾರು ರೈತರು ನಡು ರಸ್ತೆಯಲ್ಲೇ ಜಮಾವಣೆಗೊಂಡಿದ್ದರು. ನಮಗೆ ತರಕಾರಿ ಮಾರಲು ಅವಕಾಶ ನೀಡಬೇಕು ಎಂದು ರೈತರು ಆಗ್ರಹಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಜಯಪುರ ಜಿಲ್ಲಾಧಿಕಾರಿ ತರಕಾರಿ ಮಾರಾಟಗಾರರಿಗೆ ಅಡ್ಡಿಪಡಿಸದಂತೆ ಪೊಲೀಸರಿಗೆ ಸೂಚನೆ ನೀಡುವುದಾಗಿ ಹೇಳಿದ್ದಾರೆ.

Edited By : Shivu K
PublicNext

PublicNext

16/01/2022 11:53 am

Cinque Terre

104.1 K

Cinque Terre

25

ಸಂಬಂಧಿತ ಸುದ್ದಿ