ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಕೊರೊನಾಕ್ಕೆ ಡೋಂಟ್ ಕೇರ್... ಆಹಾರ ಕಿಟ್ ಪಡೆಯಲು ಮುಗಿಬಿದ್ದ ಜನರು...!

ದಾವಣಗೆರೆ: ಆಹಾರ ಕಿಟ್ ಪಡೆಯಲು ಕೊರೊನಾ ಲೆಕ್ಕಿಸದೇ ಜನರು ಮುಗಿಬಿದ್ದ ಘಟನೆ ನಗರದ ಭಾರತ್ ಕಾಲೋನಿಯ ಐದನೇ ಕ್ರಾಸ್ ಬಳಿ ನಡೆದಿದೆ.

ಬಿಜೆಪಿ ವತಿಯಿಂದ ಮಠದ ಆವರಣದಲ್ಲಿ ಆಹಾರದ ಕಿಟ್ ನೀಡುವ ಮಾಹಿತಿ ಸಿಗುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜನರು ತಂಡೋಪತಂಡವಾಗಿ ಆಗಮಿಸಿದರು. ಈ ವೇಳೆ ಸಾಮಾಜಿಕ ಅಂತರವಂತೂ ಮಾಯವಾಗಿತ್ತು. ಕೆಲವರು ಮಾಸ್ಕ್ ಧರಿಸಿದ್ದರೆ ಮತ್ತೆ ಕೆಲವರು ಮುಖಗವಸು ಧರಿಸಿರಲಿಲ್ಲ.

ಕೊರೊನಾ‌ ಮೂರನೇ ಅಲೆ ಭೀತಿ ಇದೆ ಎಂಬ ಎಚ್ಚರಿಕೆಯನ್ನು ಜಿಲ್ಲಾಡಳಿತ ಈಗಾಗಲೇ ನೀಡಿದೆ. ಕೋವಿಡ್ ಮಾರ್ಗಸೂಚಿ ಪಾಲಿಸುವಂತೆಯೂ ನಿರ್ದೇಶನ ನೀಡಿದೆ. ಆದ್ರೆ ಜನರಂತೂ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ‌. ಭಾರತ್ ಕಾಲೋನಿಯಲ್ಲಿ ಆಹಾರದ ಕಿಟ್ ನೀಡಲಾಗುತ್ತಿದೆ ಎಂಬ ಮಾಹಿತಿಯು ಕಾಡ್ಗಿಚ್ಚಿನಂತೆ ಹಬ್ಬಿದೆ.

ಕೈಯಲ್ಲಿ ಆಧಾರ್ ಕಾರ್ಡ್, ಬಿಪಿಎಲ್‌ ಕಾರ್ಡ್ ಹಿಡಿದು ತಾ ಮುಂದು ನಾ ಮುಂದು ಅಂತಾ ಜನರು ಮುಗಿಬಿದ್ದರು. ಈ ವೇಳೆ ಜನರ ನಿಯಂತ್ರಣಕ್ಕೆ ಕಾರ್ಯಕ್ರಮ ಆಯೋಜಕರು ಹರಸಾಹಸಪಡಬೇಕಾಯ್ತು. ಜನರ ನೂಕುನುಗ್ಗಲಿನಿಂದ ಬಿಜೆಪಿ ಮುಖಂಡರು ಸಾಕು ಸಾಕಾಗಿ ಹೋದರು. ಕಿಟ್ ಪಡೆಯಲು ಸಾಮಾಜಿಕ ಅಂತರ ಇರಲಿ, ಜನರು ಮುಗಿಬಿದ್ದ ದೃಶ್ಯ ನೋಡಿದರೆ ಕೊರೊನಾ ಬಗ್ಗೆ ಯಾರಿಗೂ ಭಯ ಇಲ್ಲ ಎಂದೆನಿಸದೇ ಇರದು. ಪೊಲೀಸರಾಗಲೀ, ಜಿಲ್ಲಾಡಳಿತವಾಗಲೀ ಈ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ.

ಇನ್ನು ಕಾರ್ಯಕ್ರಮ ಆಯೋಜಕರು ಎಷ್ಟೇ ಮನವಿ ಮಾಡಿದರೂ ಜನರಂತೂ ಕ್ಯಾರೇ ಎನ್ನಲಿಲ್ಲ. ತಮಗೆ ಕಿಟ್ ಸಿಕ್ಕರೆ ಸಾಕು ಎಂಬ ಮನಸ್ಥಿತಿಯಲ್ಲಿ ಇದ್ದಿದ್ದಂತೂ ಸತ್ಯ.

Edited By : Shivu K
PublicNext

PublicNext

09/08/2021 12:31 pm

Cinque Terre

67.16 K

Cinque Terre

1

ಸಂಬಂಧಿತ ಸುದ್ದಿ