ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾವುದೇ ಚೀನಿ ಪಡೆಗಳು ಭಾರತದ ಗಡಿ ಪ್ರವೇಶಿಸಿಲ್ಲ: ಅಧಿಕಾರಿಗಳ ಸ್ಪಷ್ಟನೆ

ನವದೆಹಲಿ: ಚೀನಿ ಸೈನ್ಯ ಪಡೆಗಳು ಭಾರತದ ಗಡಿ ಪ್ರವೇಶಿಸಿವೆ ಹಾಗೂ ಸ್ಥಳೀಯರು ಮತ್ತು ಐಟಿಬಿಪಿ ಸಿಬ್ಬಂದಿ ಹಸ್ತಕ್ಷೇಪದಿಂದಾಗಿ ಹಿಂದಕ್ಕೆ ಸರಿದವು ಎಂಬ ವದಂತಿಯ ವಿಡಿಯೋ ನಿಜವಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ನಾಗರಿಕ ಸಮಸ್ಯೆಯೊಂದರ ಹಳೆಯ ವಿಡಿಯೋ ಇದಾಗಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಚಾರವನ್ನು ಸ್ಥಳೀಯ ನಾಗರಿಕ ಆಡಳಿತ ನೋಡಿಕೊಳ್ಳುತ್ತದೆ. ಆದರೆ ಯಾವುದೇ ಚೀನಿ ಪಡೆಗಳು ಭಾರತದ ಗಡಿ ಪ್ರವೇಶಿಸಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಇಂತಹ ಘಟನೆಗಳು ನಡೆಯುತ್ತಲೇ ಇದೆ. ಉಭಯ ರಾಷ್ಟ್ರಗಳ ಸ್ಥಳೀಯರು ತಮ್ಮ ಸಾಕು ಪ್ರಾಣಿಗಳ ಜೊತೆ ಆ ಪ್ರದೇಶದಲ್ಲಿ ಸಂಚರಿಸುತ್ತಾರೆ ಮತ್ತು ಕೆಲವೊಮ್ಮೆ ಗಡಿಯಾಚೆ ಹೋಗುತ್ತಾರೆ. ಈ ಮಾಹಿತಿ ಐಟಿಬಿಪಿ (ಇಂಡೋ-ಟಿಬೆಟಿಯನ್​ ಬಾರ್ಡರ್​ ಪೊಲೀಸ್​) ಅಧಿಕಾರಿಗಳಿಗೂ ತಿಳಿದಿದೆ ಎಂದು ಅವರು ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

21/12/2020 06:46 pm

Cinque Terre

63.53 K

Cinque Terre

0

ಸಂಬಂಧಿತ ಸುದ್ದಿ