ಬೆಂಗಳೂರು: ಹೆಲ್ಮೆಟ್ ರಹಿತ ಸವಾರರಿಗೆ ದುಬಾರಿ ದಂಡ ವಿಧಿಸಲಾಗುತ್ತಿದೆ. ಆದರೂ ಕೆಲ ಸವಾರರು ಇದಕ್ಕೆ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಹೆಲ್ಮೆಟ್ ಧರಿಸಿದ ವಾಹನ ಸವಾರರಿಗೆ ಮಾತ್ರ ಪೆಟ್ರೋಲ್ ಎಂಬ ಹೊಸ ನಿಯಮ ಜಾರಿಗೆ ತರುತ್ತಿದ್ದಾರೆ.
ಪೊಲೀಸರು ಇದೇ ಡಿಸೆಂಬರ್ 8ರಿಂದ ಹೆಲ್ಮೆಟ್ ಕಡ್ಡಾಯಗೊಳಿಸಿ ಈ ಹೊಸ ನಿಯಮ ಜಾರಿಗೆ ತರುತ್ತಿದ್ದಾರೆ. ಈಗಾಗಲೇ ಹಲವು ನಗರಗಳಲ್ಲಿ ನೋ ಹೆಲ್ಮೆಟ್, ನೋ ಪೆಟ್ರೋಲ್ ನಿಯಮ ಜಾರಿಯಲ್ಲಿದೆ. ಇದೀಗ ಕೋಲ್ಕತ್ತಾದಲ್ಲಿ ಈ ನಿಯಮ ಜಾರಿಗೊಳಿಸಲು ಪೊಲೀಸರು ಮುಂದಾಗಿದ್ದಾರೆ.
ಕೋಲ್ಕತ್ತಾ ನಗರದಲ್ಲಿ ಪೆಟ್ರೋಲ್ ಸಿಗಬೇಕಾದರೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಲೇಬೇಕು. ಪ್ರಾಯೋಗಿಕವಾಗಿ ಡಿಸೆಂಬರ್ 8ರಿಂದ ಒಟ್ಟು 60 ದಿನಗಳ ಕಾಲ ನೂತನ ನಿಯಮ ಜಾರಿ ಮಾಡಲು ಕೋಲ್ಕತ್ತಾ ಪೊಲೀಸರು ಮುಂದಾಗಿದ್ದು, ಈಗಾಗಲೇ ನಗರದ ಎಲ್ಲಾ ಪೆಟ್ರೋಲ್ ಬಂಕ್ ಮಾಲೀಕರಿಗೆ ಸಿಬ್ಬಂದಿಗೆ ಪೊಲೀಸರು ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.
PublicNext
05/12/2020 10:54 pm